ವಿಜಯಪುರ: ಗನ್ ತೋರಿಸಿ ಸಾರ್ವಜನಿಕರನ್ನು ಬೆದರಿಸುತ್ತಿದ್ದ ರೌಡಿ ಶೀಟರ್ ಜುಟ್ಟು ಹಿಡಿದು ಎಸ್.ಪಿ. ಅನುಪಮ್ ಅಗರ್ವಾಲ್ ಕಪಾಳಕ್ಕೆ ಬಾರಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಮೈದಾನದಲ್ಲಿ 110ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಕರೆದು ಪರೇಡ್ ನಡೆಸಲಾಯಿತು.
ಈ ವೇಳೆ ಎಸ್.ಪಿ. ಅನುಪಮ್ ಅಗರ್ವಾಲ್, ಬಡ್ಡಿ ವ್ಯವಹಾರ ನಡೆಸುತ್ತಿದ್ದ ರೌಡಿ ಶೀಟರ್, ಗನ್ ತೋರಿಸಿ ಸಾರ್ವಜನಿಕರಿಗೆ ಬೆದರಿಕೆಯೊಡ್ದುತ್ತಿದ್ದ ಎಂಬ ವಿಚಾರ ತಿಳಿದು, ಗನ್ ಖರೀದಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರೌಡಿ ಶೀಟರ್ ಮಾತನಾಡದೇ ಸುಮ್ಮನೆ ನಿಂತಿದ್ದಾನೆ. ಸಿಟ್ಟಿಗೆದ್ದ ಎಸ್.ಪಿ. ರೌಡಿ ಶೀಟರ್ ಜುಟ್ಟು ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ.
ಪೊಲೀಸ್ ಅಧಿಕಾರಿ ರೌಡಿ ಶೀಟರ್ ಗಳಿಗೆ ಬೆವರಿಳಿಸಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.