alex Certify ಖಗೋಳದಲ್ಲಿ ಇಂದು ಸಂಭವಿಸಲಿದೆ ವಿಸ್ಮಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಗೋಳದಲ್ಲಿ ಇಂದು ಸಂಭವಿಸಲಿದೆ ವಿಸ್ಮಯ…!

ಖಗೋಳದಲ್ಲಿ ಇಂದು ಮಧ್ಯರಾತ್ರಿ ವಿಸ್ಮಯ ಸಂಭವಿಸಲಿದ್ದು, ಇದನ್ನು ವೀಕ್ಷಿಸಲು ಕೋಟ್ಯಾಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಹೌದು, ಇಂದು ಚಂದ್ರಗ್ರಹಣ ಸಂಭವಿಸಲಿದ್ದು ಇದು ಸಂಪೂರ್ಣವಾಗಿ ಭಿನ್ನವಾಗಿರಲಿದೆ.

ಈ ವರ್ಷದ 4 ಚಂದ್ರಗ್ರಹಣಗಳ ಪೈಕಿ ಇದು ಎರಡನೇ ಗ್ರಹಣವಾಗಿದ್ದು, ಭಾರತ ಸೇರಿದಂತೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಗೋಚರವಾಗಲಿದೆ.

ಗ್ರಹಣದ ಸಂದರ್ಭದಲ್ಲಿ ಚಂದ್ರ ತನ್ನ ಅರ್ಧಾಕಾರದಲ್ಲಿ ಕಾಣದೆ ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದ್ದು, ಹೀಗಾಗಿ ಈ ಗ್ರಹಣ ಅಪರೂಪದ್ದಾಗಿದೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ 11-15ಕ್ಕೆ ಗ್ರಹಣ ಆರಂಭವಾಗಲಿದ್ದು, ಶನಿವಾರ ಬೆಳಗಿನ ಜಾವ 2-34 ಕ್ಕೆ ಅಂತ್ಯಗೊಳ್ಳಲಿದೆ. ರಾತ್ರಿ 12-45 ರ ಸುಮಾರಿಗೆ ಪೂರ್ಣಪ್ರಮಾಣದ ಗ್ರಹಣ ಇರಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...