ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತಿರುವ ಸರ್ಕಾರಗಳು, ಹೊರರಾಜ್ಯದಿಂದ ಬಂದವರನ್ನು ಕೆಲದಿನಗಳ ಕಾಲ ಕ್ವಾರಂಟೈನ್ ನಲ್ಲಿರಿಸಲು ಮುಂದಾಗಿದ್ದವು.
ಹೀಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಯುವಕ ಹಾಗೂ ಬಾಲಕಿ ಮಧ್ಯೆ ಪ್ರೀತಿ ಅರಳಿದ್ದು, ಇದೀಗ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಇಬ್ಬರೂ ಪರಾರಿಯಾಗಿರುವ ವಿಲಕ್ಷಣ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ತಮಿಳುನಾಡಿನ 21 ವರ್ಷದ ಯುವಕ ಹಾಗೂ ಆಂಧ್ರಪ್ರದೇಶದ 12 ವರ್ಷದ ಬಾಲಕಿ ಪರಾರಿಯಾದವರಾಗಿದ್ದು, ಅಲೆಮಾರಿಗಳಾದ ಇವರುಗಳು ಕುಟುಂಬದೊಂದಿಗೆ ಗುಜರಿ ವಸ್ತುಗಳನ್ನು ಹೆಕ್ಕಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ.