ಚಿತ್ರದುರ್ಗ: ನಿಂತಿದ್ದ ಕ್ಯಾಂಟರ್ ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಹಾ ಕುಡಿಯುತ್ತ ನಿಂತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಮಾರ್ (24) ಹಾಗೂ ವಿಜಯ್ (28) ಮೃತ ದುರ್ದೈವಿಗಳು. ಟ್ಯಾಂಕರ್ ನಿಲ್ಲಿಸಿ ಇಬ್ಬರು ಚಹಾ ಕುಡಿಯುತ್ತಿದ್ದರು. ಮೇಟಿಕುರ್ಕೆ ರಾಷ್ಟ್ರೀಯ ಹೆದ್ದಾರಿ ಬಳಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಐದು ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.