ಬಾಗಲಕೋಟೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 7955 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂತಹ ಆತಂಕದ ಸ್ಥಿತಿ ನಡುವೆಯೂ ಜನರು ಬೇಜವಾಬ್ದಾರಿ ಮೆರೆಯುವುದನ್ನು ಮುಂದುವರೆಸಿದ್ದಾರೆ. ಕೊರೊನಾ ಎರಡನೆ ಅಲೆಯ ನಡುವೆಯೂ ಶ್ರೀಶೈಲಂಗೆ ಪಾದಯಾತ್ರೆ ಮೂಲಕ ತೆರಳಿದ ಭಕ್ತರು ತೆರಳಿದ್ದು, 7 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಹಲವರು ಪಾದಯಾತ್ರೆ ಮೂಲಕ ಆಂಧ್ರಪ್ರದೇಶದ ಶ್ರೀಶೈಲಂ ಗೆ ತೆರಳಿದ್ದಾರೆ. ಅವರಲ್ಲಿ 7 ಜನರಲ್ಲಿ ಈಗ ಕೊರೊನಾ ಸೋಂಕು ಪತ್ತೆಯಾಗಿದೆ. ಆದರೆ ಈ 7 ಜನ ಭಕ್ತರು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಾಗಲಕೋಟೆಯಿಂದ ಆಂಧ್ರಪ್ರದೇಶದ ಶ್ರೀಶೈಲಂವರೆಗೂ ಈ ಭಕ್ತರು ಕೊರೊನಾ ಹೊತ್ತು ಪಾದಯಾತ್ರೆ ಮಾಡಿದ್ದು ಆತಂಕವನ್ನು ಹೆಚ್ಚಿಸಿದೆ.
ಒಂದೇ ದಿನದಲ್ಲಿ 1 ಲಕ್ಷ 45 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆ – ದೇಶದಲ್ಲಿವೆ ಒಟ್ಟು10,46,631 ಸಕ್ರಿಯ ಪ್ರಕರಣ
ಕೋವಿಡ್ ಸ್ಯಾಂಪಲ್ ಟೆಸ್ಟ್ ಕೊಟ್ಟು ಈ ಭಕ್ತರು ಶ್ರೀಶೈಲಂಗೆ ಪಾದಯಾತ್ರೆ ತೆರಳಿದ್ದರು. ಇದೀಗ ಭಕ್ತರ ವರದಿ ಬಂದಿದ್ದು, 7 ಜನರ ವರದಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀಶೈಲಂಗೆ ತೆರಳಿದ 7 ಭಕ್ತರ ಪತ್ತೆಗಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ ಬಾಗಲಕೋಟೆ ಜಿಲ್ಲಾಡಳಿತ ಮನವಿ ಮಾಡಿದೆ.