ಬೆಂಗಳೂರು: ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿರುವ ಕೊರೊನಾ ಎರಡನೇ ಅಲೆ ಹಾಗೂ ರೂಪಾಂತರ ವೈರಸ್ ಬಗ್ಗೆ ಜನರಲ್ಲಿರುವ ಕೆಲ ತಪ್ಪು ಗ್ರಹಿಕೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡಾ.ರಾಜು ಕೃಷ್ಣಮೂರ್ತಿ ಕೊರೊನಾ ಕುರಿತು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸೋಂಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಕುತೂಹಲಕಾರಿ ಮಾಹಿತಿಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ಎರಡನೇ ಅಲೆಗೆ ರೂಪಾಂತರಗೊಂಡಿರುವ ವೈರಸ್ ಕಾರಣ. ಆರಂಭದಲ್ಲಿ ಕೊರೊನಾ ವೈರಸ್ ಗೆ ನೀಡಿದ ಲಸಿಕೆ ರೂಪಾಂತರಕ್ಕೆ ಕಾರಣವಾಗಿ ಅದಿಂದು ವ್ಯಾಪಕವಾಗಿ ಹರಡುವಂತಾಗಿದೆ. ಅನಗತ್ಯವಾದ ಔಷಧ, ಸ್ಯಾನಿಟೈಸರ್ ಹಾಗೂ ವ್ಯಾಕ್ಸಿನೇಷನ್ ಕೊರೊನಾ ವೈರಸ್ ರೂಪಾಂತರಗೊಂಡು 2ನೇ ಅಲೆ ಆರಂಭವಾಗಲು ಮುಖ್ಯ ಕಾರಣ ಎಂಬ ಶಾಕಿಂಗ್ ವಿಚಾರವನ್ನು ಡಾ. ರಾಜು ಹೇಳಿದ್ದಾರೆ.
ಕೊರೋನಾ ತಡೆಗೆ ಮತ್ತೆ ಕಠಿಣ ನಿಯಮ: ರಾತ್ರಿ 9 ಗಂಟೆಯೊಳಗೆ ಅಂಗಡಿ ಮುಚ್ಚಲು ಆದೇಶಿಸಿದ ಕೇರಳ ಸರ್ಕಾರ
ಸರ್ಕಾರ ಹಾಗೂ ವೈದ್ಯರು ಹೇಳುವಂತೆ ಕೊರೊನಾ ಎರಡನೇ ಅಲೆ ಆರಂಭವಾಗಲು ಜನಸಾಮಾನ್ಯರ ಬೇಜವಾಬ್ದಾರಿ ಕಾರಣ, ಮಾಸ್ಕ್, ದೈಹಿಕ ಅಂತರ ಇಲ್ಲದಿರುವುದು, ಕೋವಿಡ್ ನಿಯಮ ಪಾಲಿಸದಿರುವುದೇ ಕಾರಣ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಕೊರೊನಾ ಸೋಂಕಿಗೆ ನಿರ್ದಿಷ್ಟವಾದ ಔಷಧವಿಲ್ಲ. ಹಾಗಾಗಿ ಔಷಧ ಇಲ್ಲ ಎಂಬುದು ಗೊತ್ತಿದ್ದರೂ ಆಸ್ಪತ್ರೆಗಳು ಸೋಂಕಿತ ರೋಗಿಗಳಿಗೆ ಅನಗತ್ಯ ಔಷಧಗಳನ್ನು ನೀಡಿ ಬಿಲ್ ಹೆಚ್ಚಳ ಮಾಡಿದ್ದು, ವ್ಯಾಕ್ಸಿನೇಷನ್ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ಹಾಗೂ ಅದಕ್ಕೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರವೇ ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ಕಾರಣ ಎಂದು ಹೇಳಿದ್ದಾರೆ.
ಕೊರೊನಾ ಮೊದಲ ಅಲೆ ಆರಂಭವಾದಾಗಲೇ ಸೋಂಕಿತರನ್ನು ಗುರುತಿಸಿ ಮನೆಯಲ್ಲೇ ಇದ್ದು, ಔಷಧಗಳ ಮೂಲಕ ಚಿಕಿತ್ಸೆ ನೀಡಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಿದ್ದರೆ ಎರಡನೇ ಅಲೆ ಎಂಬುದೇ ಬರುತ್ತಿರಲಿಲ್ಲ. ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿಯನ್ನು ಐಸೋಲೇಷನ್ ಮಾಡಿ ಸೋಂಕು ನಿಯಂತ್ರಣ ಮಾಡಬಹುದು ಎಂಬುದು ಸಾಧ್ಯವಿಲ್ಲದ ಮಾತು. ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗುವಷ್ಟರಲ್ಲಿ ಅವರ ಸಂಪರ್ಕಕ್ಕೆ ಬಂದ ಬಹುತೇಕ ಜನರಿಗೆ ವೈರಸ್ ಹರಡಿರುತ್ತದೆ. ಅತಿ ವೇಗವಾಗಿ ಈ ವೈರಸ್ ವ್ಯಾಪಿಸುತ್ತದೆ. ವಿಪರೀತ ಜ್ವರ, ವಾಂತಿ, ಬೇಧಿ, ಅತಿಯಾದ ಸುಸ್ತು ಕೊರೊನಾ ಮುಖ್ಯ ಲಕ್ಷಣವಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಅತ್ಯಗತ್ಯ ಮಾಹಿತಿಗಳನ್ನು ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದು, ವಿಡಿಯೋವನ್ನು ನೀವು ನೋಡಿ ಅಭಿಪ್ರಾಯವನ್ನು ತಿಳಿಸಿ.
https://www.facebook.com/watch/?v=204285034507681