alex Certify ಇಲ್ಲಿದೆ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಹಾಗೂ ಹಿರಿಯ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

* ಹೆಚ್ಚು ರೋಗ ಲಕ್ಷಣಗಳಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ

* ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ರೋಗಿಗಳಿಗೆ ಕಾಯ್ದಿರಿಸಲು ಕ್ರಮ

* ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲು

* ಸರ್ಕಾರಿ ಆಸ್ಪತ್ರೆಗಳಲ್ಲಿ 1000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಲು ನಿರ್ಧಾರ

* ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆ ಕೋವಿಡ್ ರೋಗಿಗಳಿಗೆ

* ದಿನದ 24 ಗಂಟೆಗಳ ಕಾಲ ಅಧಿಕಾರಿಗಳ ಕಾರ್ಯ ನಿರ್ವಹಣೆ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಓರ್ವ ಐ.ಪಿ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳನ್ನು ಹಾಗೂ ಬಿ.ಡಬ್ಲ್ಯೂ.ಎಸ್.ಎಸ್.ಬಿ., ಬೆಸ್ಕಾಂ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ

* ರಾಜ್ಯದಲ್ಲಿ ಸದ್ಯಕ್ಕೆ ರೆಮ್ ಡಿಸಿವೆರ್ ಕೊರತೆ ಇಲ್ಲ. ಆದಾಗ್ಯೂ ಹೆಚ್ಚುವರಿ ಡೋಸ್ಗಳನ್ನು ಖರೀದಿ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದನ್ನು ಅಂತಿಮಗೊಳಿಸಿ ಹೆಚ್ಚುವರಿ ಡೋಸ್ಗಳನ್ನು ಸಂಗ್ರಹಿಸಲು ಕ್ರಮ

* 5,000 ಆಕ್ಸಿಜನ್ ಸಿಲಿಂಡರ್ಗಳ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ

* ಪದೇ ಪದೇ ಆಕ್ಸಿಜನ್ ಸಿಲಿಂಡರ್ಗಳ ಬದಲಾವಣೆ ತಪ್ಪಿಸಲು ಜಂಬೋ ಸಿಲಿಂಡರ್ಗಳನ್ನು ಖರೀದಿಸಲು ಕ್ರಮ

* ಫ್ರಂಟ್ಲೈನ್ ವರ್ಕರ್ಗಳಾದ ವೈದ್ಯರು, ನರ್ಸ್ಗಳನ್ನು 6 ತಿಂಗಳ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕ್ರಮ

* ರಾಜ್ಯಾದ್ಯಂತ ಕಾಟ್ಯಾಂಕ್ಟ್ ಟ್ರೇಸಿಂಗ್ ಗಳನ್ನು ತ್ವರಿತಗೊಳಿಸುವುದು

* ಹೋಮ್ ಐಸೋಲೇಷನ್ ಇರುವ ರೋಗಿಗಳಿಗೆ ಮುದ್ರೆ ಹಾಕಲು ಕ್ರಮ ಕೈಗೊಳ್ಳುವುದು.

* ಪ್ರತಿದಿನ ನಡೆಸುವ ಕೋವಿಡ್ ಟೆಸ್ಟ್ ರಿಪೋರ್ಟ 24 ಗಂಟೆಯೋಳಗಾಗಿ ತಪ್ಪದೇ ಲಭ್ಯವಾಗುವಂತೆ ಕ್ರಮ

* ಟೆಸ್ಟಿಂಗ್ ಅವಧಿ ಕಡಿಮೆಗೊಳಿಸಲು ಅಗತ್ಯ ಕ್ರಮ

* ಕಂಟೈನ್ಮೆಂಟ್ ಝೋನ್ಗಳನ್ನು ಮತ್ತು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಕಟ್ಟುನಿಟ್ಟು ಜಾರಿ

* ಅನಗತ್ಯವಾಗಿ ಜನ ಗುಂಪು ಸೇರುವುದನ್ನು ತಡೆಗಟ್ಟಲು ಕ್ರಮ

* ಬೇಡಿಕೆಗನುಗುಣವಾಗಿ ಉಚಿತವಾಗಿ 108 ಸೇರಿದಂತೆ ಅಗತ್ಯ ಆಂಬುಲೆನ್ಸ್ ಗಳನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲೂ ಲಭ್ಯವಿರುವಂತೆ ಕ್ರಮ

* ಬೆಂಗಳೂರು ನಗರದಲ್ಲಿ 400 ಆಂಬ್ಯೂಲೆನ್ಸ್ ಕೋವಿಡ್ ರೋಗಿಗಳಿಗೋಸ್ಕರ ಉಚಿತವಾಗಿ ಸೇವೆ ಒದಗಿಸಲು ಮೀಸಲು

* 49 ಶ್ರದ್ಧಾಂಜಲಿ ಆಂಬ್ಯುಲೆನ್ಸ್ ಉಚಿತವಾಗಿ ಸೇವೆ ಒದಗಿಸಲು ಮೀಸಲು

* ಚಿತಾಗಾರಗಳಲ್ಲಿ ಕೋವಿಡ್ನಿಂದಾಗಿ ಮೃತಪಟ್ಟ ಶವಗಳ ಅಂತ್ಯ ಕ್ರಿಯೆಯನ್ನು ಉಚಿತವಾಗಿ ನೆರವೇರಿಸಲು ಕ್ರಮ

* ಬಿ.ಬಿ.ಎಂ.ಪಿ. ಎಲ್ಲಾ ವಲಯಗಳ ಮತ್ತು ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸಿ ಕೋವಿಡ್ ರೋಗಿಗಳ ಸಹಾಯಕ್ಕೆ ಸದಾ ಬದ್ಧರಾಗಿರುವಂತೆ ಕ್ರಮ

* ಸಹಾಯವಾಣಿಗಳಿಗೆ ನುರಿತ ವ್ಯಕ್ತಿಗಳ ನೇಮಕ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...