ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದ್ದು, ದಿನನಿತ್ಯ ಸಾವಿರಾರು ಮಂದಿ ಸೋಂಕಿಗೊಳಗಾಗುತ್ತಿದ್ದಾರೆ. ಈ ಪೈಕಿ ಗಂಭೀರ ಸಮಸ್ಯೆಗೊಳಗಾದವರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಕೆಲವರು ಇಡುತ್ತಿರುವ ಬೇಡಿಕೆ ಕೇಳಿ ವೈದ್ಯರಿಗೆ ಶಾಕ್ ಆಗಿದೆ.
ಆಸ್ಪತ್ರೆಗೆ ದಾಖಲಾದ ಕೆಲ ಸೋಂಕಿತರು ತಮಗೆ ಗ್ಲೂಕೋಸನ್ನು ಡ್ರಿಪ್ ಮೂಲಕ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ ದ್ರವ ಪದಾರ್ಥಗಳನ್ನು ಡ್ರಿಪ್ ಮೂಲಕ ರಕ್ತನಾಳಗಳಿಗೆ ಕೊಡುವಂತಿಲ್ಲ.
ʼಕೊರೊನಾʼ 2 ನೇ ಅಲೆಯಿಂದ ಬೆಚ್ಚಿಬಿದ್ದಿರುವ ಶ್ರೀಸಾಮಾನ್ಯರಿಗೆ ನೆಮ್ಮದಿ ನೀಡುತ್ತೆ ಈ ಮಾಹಿತಿ
ವೈರಸ್ ಪರಿಣಾಮದಿಂದ ಸೋಂಕಿತರ ಶ್ವಾಸಕೋಶದ ಮೇಲೆ ಒತ್ತಡ ಇರುತ್ತದೆ. ಇಂತಹ ಸಂದರ್ಭದಲ್ಲಿ ಡ್ರಿಪ್ ಮೂಲಕ ಗ್ಲುಕೋಸ್ ಸೇರಿದಂತೆ ಇತರೆ ದ್ರವ ಪದಾರ್ಥಗಳನ್ನು ನೀಡಿದರೆ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈ ನಿಯಮವನ್ನು ಸೂಚಿಸಲಾಗಿದೆ.
ಆದರೆ ಸೋಂಕಿತರು ನಾಲಿಗೆ ರುಚಿ ಕಳೆದುಕೊಳ್ಳುವ ಕಾರಣ ಅವರುಗಳಿಗೆ ಹೆಚ್ಚಿನ ಆಹಾರ ಸೇರುವುದಿಲ್ಲ. ಹೀಗಾಗಿ ಸಹಜವಾಗಿಯೇ ನಿತ್ರಾಣಗೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ತಮಗೆ ಗ್ಲೂಕೋಸ್ ನೀಡಿ ಎಂಬ ಬೇಡಿಕೆಯನ್ನು ವೈದ್ಯರ ಮುಂದಿಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರುಗಳಿಗೆ ತಿಳಿಹೇಳಲು ವೈದ್ಯರುಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.