ಮಾರ್ಚ್ ತಿಂಗಳಿನಿಂದ ದೇಶದ ಜನರನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಇನ್ನೂ ತಹಬದಿಗೆ ಬಂದಿಲ್ಲ. ಲಸಿಕೆ ಕಂಡು ಹಿಡಿಯುವವರೆಗೆ ಇದರ ಆರ್ಭಟ ಮುಂದುವರಿಯಲಿದೆ ಎನ್ನಲಾಗಿದ್ದು, ಕೊರೊನಾ ಅಬ್ಬರಕ್ಕೆ ಸಾರ್ವಜನಿಕರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಹೈರಾಣಾಗಿ ಹೋಗಿದ್ದಾರೆ.
ಇದರ ಜೊತೆಗೆ ಕೊರೊನಾ ಸೋಂಕಿತರನ್ನು ಜನಸಾಮಾನ್ಯರು ನೋಡುವ ರೀತಿಯೇ ಬೇರೆಯಾಗಿದ್ದು, ಇದು ಮತ್ತೊಂದು ಕಿರಿಕಿರಿಯಾಗಿದೆ. ಇದರ ನಡುವೆಯೂ ಕೆಲವರು ಕೋವಿಡ್ ಸೋಂಕಿತರೊಂದಿಗೆ ಬೆರೆಯುವ ಮೂಲಕ ಅವರುಗಳಿಗೆ ಮಾನಸಿಕ ಹಾಗೂ ನೈತಿಕ ಸ್ಥೈರ್ಯ ತುಂಬುತ್ತಿದ್ದಾರೆ.
ಹೊನ್ನಾಳ್ಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಇಂತಹುದೊಂದು ಕಾರ್ಯ ಮಾಡಿದ್ದು, ಅವರು ಕುಟುಂಬ ಸದಸ್ಯರು ಹಾಗೂ ಆಪ್ತರೊಂದಿಗೆ ದಾವಣಗೆರೆಯ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.