ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ದೇಶದಲ್ಲಿ ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಸದ್ಯ ದೇಶದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಾ ಸಾಗಿದ್ದು, ಕೊರೊನಾ ಸಂಕಷ್ಟದ ನಡುವೆ ವಿದ್ಯುತ್ ಬಳಕೆದಾರರಿಗೆ ನೆಮ್ಮದಿಯ ಸುದ್ದಿಯೊಂದು ಇಲ್ಲಿದೆ.
ಪ್ರತಿವರ್ಷ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡುತ್ತಿದ್ದು, ಆದರೆ ಕೊರೊನಾ ಕಾರಣಕ್ಕಾಗಿ ಕಳೆದ ಏಳು ತಿಂಗಳಿನಿಂದ ಈ ಕಾರ್ಯವನ್ನು ಮಾಡಿಲ್ಲ. ಲಾಕ್ಡೌನ್ ನಿಂದ ಜನತೆ ಆರ್ಥಿಕವಾಗಿ ತತ್ತರಿಸಿರುವುದರಿಂದ ಸರ್ಕಾರ ಈ ಕಾರ್ಯಕ್ಕೆ ಕೈ ಹಾಕಿಲ್ಲ.
ಇದೀಗ ಲಾಕ್ಡೌನ್ ತೆರವುಗೊಂಡು ಎಂದಿನಂತೆ ಕೆಲಸ ಕಾರ್ಯಗಳು ಆರಂಭವಾಗಿದ್ದರೂ ಸಹ ಈ ಮೊದಲಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಜೊತೆಗೆ ಉಪಚುನಾವಣೆಯೂ ನಡೆಯುತ್ತಿದ್ದು, ಹೀಗಾಗಿ ಸದ್ಯಕ್ಕೆ ವಿದ್ಯುತ್ ಶುಲ್ಕ ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಲಾಗಿದೆ.