ಬೆಂಗಳೂರು: ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಕೊರೊನಾ 2ನೇ ಅಲೆ ಭೀತಿ ಆರಂಭವಾಗಿದೆ. ಹಾಗಾದರೆ ಮಾಹಾಮಾರಿಯ ಎರಡನೇ ಅಲೆ ಆರಂಭವಾಗಿರುವುದುು ನಿಜವೇ…? ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ.
ಇದೇ ವೇಳೆ ಕೊರೊನಾ ವ್ಯಾಕ್ಸಿನ್ ಪಡೆದವರು ಮದ್ಯಪಾನ ಮಾಡಬಾರದೇ ಎಂಬ ಪ್ರಶ್ನೆ ಕೂಡಾ ಹಲವರಲ್ಲಿದೆ. ಜನಸಾಮಾನ್ಯರ ಈ ಎಲ್ಲಾ ಗೊಂದಲಗಳಿಗೆ ಖ್ಯಾತ ವೈದ್ಯ ಡಾ. ರಾಜು ತಮ್ಮ ಹೊಸ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ.
ಕೊರೊನಾ ಪ್ರಕರಣ ಹೆಚ್ಚುತ್ತಿರುವುದು ನಿಜ. ಸೀಜನಲ್ ಬದಲಾವಣೆಗಳು ಆದಾಗ, ವಾತಾವರಣದಲ್ಲಿ ವ್ಯತ್ಯಾಸಗಳಾದಾಗ ವೈರಲ್ ಇನ್ ಫೆಕ್ಷನ್ ಆಗುವುದು ಸಹಜ. ಚಳಿಗಾಲದಿಂದ ಬೇಸಿಗೆ ಬಂದಾಗ, ಬೇಸಿಗೆಯಿಂದ ಮಳೆಗಾಲಕ್ಕೆ ಹೋದಾಗ ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆ ಸಾಮಾನ್ಯ. ವರ್ಷದಲ್ಲಿ ಮೂರು ಬಾರಿ ಈ ರೀತಿಯ ಇನ್ ಫೆಕ್ಷನ್ ಆಗುವುದು ಸಹಜ. ಇಂತಹ ಸಮಸ್ಯೆಗಳು ಇದ್ದಾಗ ವೈದ್ಯರ ಬಳಿ ಹೋದಾಗ ಕೆಲವರು ಕೋವಿಡ್ ಇರಬಹುದು ಎಂದು ಆರ್ ಟಿಪಿಸಿಆರ್ ಟೆಸ್ಟ್ ಗೆ ಸೂಚಿಸುತ್ತಾರೆ. ಈ ವೇಳೆ ಪಾಸಿಟಿವ್ ಬರುವುದು ಸಹಜ. ಅದನ್ನೇ ಕೊರೊನಾ ಎರಡನೇ ಅಲೆ ಎಂದು ಹೇಳುವುದು ತಪ್ಪು.
ಕೊರೊನಾ 2ನೇ ಅಲೆ ಆರಂಭವಾದರೂ ಜನರ ನಿರ್ಲಕ್ಷ…! ಇದರ ಹಿಂದಿದೆಯಂತೆ ಈ ಕಾರಣ
ನೆಗಡಿ, ಕೆಮ್ಮು, ಜ್ವರ ಇದ್ದಾಗ ಕೊರೊನಾ ಟೆಸ್ಟ್ ಮಾಡಿಸಿ ಇದು ಕೊರೊನಾ ಎರಡನೇ ಅಲೆ ಎಂದು ಬಿಂಬಿಸಲಾಗುತ್ತಿದೆ. ಇಂಥಹ ಫೇಕ್ ಆರ್ ಟಿಪಿಸಿ ಆರ್ ಟೆಸ್ಟ್ ಗಳನ್ನು ನಂಬಬೇಡಿ ಈ ಮೂಲಕ ಜನರ ಮಾನಸಿಕ ಸ್ಥೈರ್ಯ ಕುಂದಿಸುವ ಯತ್ನ ನಡೆಯುತ್ತಿದೆ. ಇದರಿಂದ ಜನರು ಎಚ್ಚರವಾಗಿರುವುದು ಮುಖ್ಯ ಎಂದು ಹೇಳಿದ್ದಾರೆ.
ಇದೇ ವೇಳೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡಾಗ ಮದ್ಯಪಾನ ಮಾಡಬಹುದೇ ಎಂಬ ಹಲವರ ಪ್ರಶ್ನೆಗೂ ಡಾ. ರಾಜು ಉತ್ತರಿಸಿದ್ದಾರೆ.
ಯಾವುದೇ ವ್ಯಾಕ್ಸಿನ್ ಪಡೆದಾಗ ಆಲ್ಕೋಹಾಲ್ ಕುಡಿಯಬಾರದೆಂಬ ನಿರ್ಬಂಧವಿಲ್ಲ. ಆದರೆ ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ. ಅಲ್ಲದೇ ಮಾರನೆಯ ದಿನ ಹ್ಯಾಂಗೋವರ್ ಇರುವುದರಿಂದ ತಲೆ ಸುತ್ತು, ವಾಕರಿಕೆ, ಹೊಟ್ಟೆನೋವಿನಂತಹ ಸಮಸ್ಯೆಯಾದಾಗ ವ್ಯಾಕ್ಸಿನ್ ನಿಂದ ಹೀಗಾಗುತ್ತಿದೆ ಎಂದು ಜನರು ತಪ್ಪು ತಿಳಿದುಕೊಳ್ಳುವ ಸಾಧ್ಯತೆ ಇರುವುದರಿಂದ ವ್ಯಾಕ್ಸಿನ್ ಪಡೆದಾಗ ಆಲ್ಕೋಹಾಲ್ ಸೇವನೆ ಬೇಡ ಎಂಬುದು ವೈದ್ಯರ ಸಲಹೆ ಎಂದು ತಿಳಿಸಿದ್ದಾರೆ.
https://www.facebook.com/106521611130177/posts/251586313290372/?sfnsn=wiwspwa