ಬೆಂಗಳೂರು: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ಕೊರೊನಾ ಸೋಂಕಿತರು ಏನು ಮಾಡಬೇಕು? ಏನು ಮಾಡಬಾರದು ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆಗಳನ್ನು ನೀಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಇಂತಹ ಗೊಂದಲಗಳನ್ನು ನಿವಾರಿಸಿರುವ ಡಾ. ರಾಜು ಕೃಷ್ಣಮೂರ್ತಿ ಕೊರೊನಾ ಪಾಸಿಟಿವ್ ಬಂದವರು ಅನುಸರಿಸಲೇಬೇಕಾದ ಅಗತ್ಯ ಮಾಹಿತಿಗಳನ್ನು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ಪಾಸಿಟಿವ್ ಬಂದಾಗ ಮನೆಯವರಿಂದ ಯಾವುದೇ ಕಾರಣಕ್ಕೂ ವಿಷಯ ಮುಚ್ಚಿಡುವ ಕೆಲಸ ಮಾಡಬೇಡಿ. ತಕ್ಷಣ ವೈದ್ಯರ ಸಲಹೆ ಪಡೆದು ಔಷಧಿ ತೆಗೆದುಕೊಳ್ಳಿ. ಕೊರೊನಾ ಲಕ್ಷಣಗಳು ಇದ್ದವರಲ್ಲಿ ಕೆಮ್ಮು, ಕಫ ಇದ್ದಾಗ ಸ್ಟೀಮ್ ತೆಗೆದುಕೊಳ್ಳದಿರುವುದು ಒಳ್ಳೆಯದು. ಈ ಸಂದರ್ಭದಲ್ಲಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಕಫ ಹೆಚ್ಚಾಗುತ್ತದೆ. ಅಲ್ಲದೇ ಕೆಮ್ಮು ಇದ್ದಾಗ ಸೋಂಕಿತರು ಪ್ರಾಣಾಯಾಮ ಮಾಡದಿರುವುದು ಉತ್ತಮ. ನಿಂಬೆರಸವನ್ನು ಮೂಗಿಗೆ ಹಾಕಿಕೊಳ್ಳುವ ಕೆಲಸ ಕೂಡ ಮಾಡಬಾರದು. ಇದರಿಂದ ಕಫ ಜಾಸ್ತಿಯಾಗಿ ಸ್ಯಾಚುರೇಷನ್ ಕಡಿಮೆಯಾಗುತ್ತದೆ. ಅತಿ ಬಿಸಿ ನೀರಿನ ಸ್ನಾನಕ್ಕಿಂತ ಬಿಸಿ ನೀರಿನ ಬಟ್ಟೆಯಿಂದ ಮೈ ಒರೆಸಿಕೊಳ್ಳುವುದು ಒಳಿತು……ಹೀಗೆ ಕೊರೊನಾ ಸೋಂಕು ತಗುಲಿದರೆ ಅನುಸರಿಸಬೇಕಾದ ಸುಲಭ ಕ್ರಮಗಳ ಬಗ್ಗೆ ಈ ವಿಡಿಯೋದಲ್ಲಿ ಡಾ. ರಾಜು ಮಾಹಿತಿ ನೀಡಿದ್ದಾರೆ.
ಜ್ವರ ಬಾರದಿದ್ದರೂ ಮತ್ತೊಂದು ರೀತಿಯಲ್ಲಿ ವೃದ್ದರನ್ನು ಕಾಡುತ್ತಿದೆ ʼಕೊರೊನಾʼ
ಡಾ.ರಾಜು ಅವರ ಈ ಹೊಸ ವಿಡಿಯೋವನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.youtube.com/watch?v=DT_kDyrIXpM