ಕೊರೊನಾ ಮಹಾಮಾರಿ ಆರ್ಭಟ ದೇಶದಲ್ಲಿ ಕೊಂಚ ಮಟ್ಟಿಗೆ ಇಳಿಯುತ್ತಿದೆ. ಈ ಮಧ್ಯೆ ಸಾಲು ಸಾಲು ಹಬ್ಬಗಳು ಇರೋದ್ರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಜನ ಮೈ ಮರೆತು ಓಡಾಡುತ್ತಿದ್ದಾರೆ.
ಹೌದು, ದೀಪಾವಳಿ ಹಬ್ಬದ ಹಿನ್ನೆಲೆ ರಾಜ್ಯದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೀತಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಜನ ಕೊರೊನಾ ಇಲ್ಲವೇನೋ ಎಂಬಂತೆ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜನ ಓಡಾಡುತ್ತಿರುವುದು ಮತ್ತಷ್ಟು ಕೊರೊನಾ ಹೆಚ್ಚಾಗುತ್ತದೆ ಎಂಬ ಆತಂಕ ಎದುರಾಗಿದೆ.
ಇತ್ತ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲೂ ವ್ಯಾಪಾರ ವಹಿವಾಟು ಜೋರಾಗಿ ನಡೀತಿದೆ. ಸಾವಿರಾರು ಜನ ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಬಂದಿದ್ದು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಆರೋಗ್ಯಕ್ಕಿಂತ ಹಬ್ಬವೇ ಹೆಚ್ಚಾಯ್ತು ಅನ್ನೋ ಮಾತು ಕೆ.ಆರ್.ಮಾರುಕಟ್ಟೆ ನೋಡಿದ್ರೆ ಅಕ್ಷರಶಃ ನಿಜ ಅನ್ನಿಸುತ್ತಿದೆ. ಜನರ ಈ ವರ್ತನೆ ಹಾಗೂ ಸಾಮಾಜಿಕ ಅಂತರ ಇಲ್ಲದೇ ಇರೋ ಪರಿಸ್ಥಿತಿಯನ್ನ ನೋಡಿದರೂ ಪಾಲಿಕೆ ಕಂಡು ಕಾಣದಂತೆ ಇದೆ.