ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಭಯ ಭೀತಿಗೊಳಗಾಗಿದ್ದ ಜನ ಸಾಮಾನ್ಯರಿಗೆ ತಮ್ಮ ವಿಡಿಯೋ ಮೂಲಕ ಅರಿವು ಮೂಡಿಸುತ್ತಿರುವ ಡಾ. ರಾಜು ಅವರುಗಳ ಪಾಲಿಗೆ ದೇವರಾಗಿ ಪರಿಣಮಿಸಿದ್ದಾರೆ. ಕೊರೊನಾ ಕುರಿತ ನೆಗೆಟಿವ್ ಸುದ್ದಿಗಳನ್ನೇ ಕೇಳಿ ಕೇಳಿ ಆತಂಕದಲ್ಲಿ ದಿನ ದೂಡುತ್ತಿದ್ದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಡಾ. ರಾಜು ಅವರ ಮಾತುಗಳು ಸಾಂತ್ವನ ನೀಡುತ್ತಿವೆ.
ಈಗಾಗಲೇ ತಮ್ಮ ಕೆಲ ವಿಡಿಯೋಗಳಲ್ಲಿ ಕೊರೊನಾ ಕುರಿತು ಭಯ ಬೇಡ. ಇದು ನೆಗಡಿ-ಕೆಮ್ಮಿನಂತೆ ಒಂದು ಸಾಂಕ್ರಾಮಿಕ ರೋಗ. ಇದಕ್ಕೆ ಯಾವುದೇ ಔಷಧಿಯಿಲ್ಲ. ಆದರೆ ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದ ಡಾ. ರಾಜು, ಜೊತೆಗೆ ಕೊರೊನಾ ಸಂದರ್ಭದಲ್ಲಿ ಜನರಲ್ಲಿನ ಭಯವನ್ನೇ ದುರುಪಯೋಗಪಡಿಸಿಕೊಂಡು ಹಣ ಸುಲಿಗೆ ಮಾಡುತ್ತಿರುವ ಧನದಾಹಿ ಆಸ್ಪತ್ರೆಗಳ ವಿರುದ್ದ ಕಿಡಿ ಕಾರಿದ್ದರು.
ಕೊರೊನಾ ಕುರಿತು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಡಾ. ರಾಜು, ಕೊರೊನಾ ಸೋಂಕಿಗೊಳಗಾದವರಿಗೆ ಪ್ರೀತಿ, ವಿಶ್ವಾಸ ಮುಖ್ಯ. ಯಾವುದೇ ರೋಗಲಕ್ಷಣಗಳಿಲ್ಲದ ಪಕ್ಷದಲ್ಲಿ ಅಂತವರು ಮನೆಯಲ್ಲಿಯೇ ಇರುವುದು ಸೂಕ್ತ ಎಂದು ಹೇಳಿದ್ದರು. ಇದೀಗ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಲು ಕಾರಣವೇನು ಎಂಬುದನ್ನು ಸವಿಸ್ತಾರವಾಗಿ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.facebook.com/106521611130177/videos/423177391977287