ಕೊರೊನಾ ಸಾರ್ವಜನಿಕರನ್ನು ಎಷ್ಟರಮಟ್ಟಿಗೆ ಕಂಗೆಡಿಸಿದೆ ಎಂದರೆ ಸೋಂಕಿತರನ್ನು ಕಂಡರೆ ಮಾರು ದೂರ ಸರಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೂ ನೆರವು ನೀಡಲು ಯಾರೂ ಮುಂದೆ ಬರುತ್ತಿಲ್ಲ.
ಅಲ್ಲದೆ ಕೊರೊನಾ ಸೋಂಕಿಗೊಳಗಾದವರನ್ನು ಸಾರ್ವಜನಿಕರು ನೋಡುವ ರೀತಿಯೇ ಬೇರೆಯಾಗಿದೆ. ಹೀಗಾಗಿ ಸೋಂಕಿತರು ಬಹಿರಂಗವಾಗಿ ಹೇಳಿಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ.
ಮೈಸೂರಿನಲ್ಲಿ ನಡೆದ ಪ್ರಕರಣವೊಂದರಲ್ಲಿ ಆರೋಗ್ಯ ಸಿಬ್ಬಂದಿ ರಾಂಡಮ್ ಟೆಸ್ಟ್ ಮಾಡುವ ವೇಳೆ ಯುವತಿಯೊಬ್ಬರಿಗೆ ಪಾಸಿಟಿವ್ ಕಂಡುಬಂದಿದೆ. ಇದನ್ನು ಆಕೆಗೆ ತಿಳಿಸಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದು, ಆದರೆ ಹೆದರಿದ ಯುವತಿ ಬೈಕಿನಲ್ಲಿ ಪರಾರಿಯಾಗಿದ್ದಾಳೆ.