ದೇಶದಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದ್ದು, ಏನೆಲ್ಲಾ ಕ್ರಮ ಕೈಗೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಮಧ್ಯೆ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಸಹಜವಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಲಾಕ್ ಡೌನ್ ಸಡಿಲಿಕೆ ಅನಿವಾರ್ಯವಾಗಿರುವ ಕಾರಣ ಕೊರೊನಾ ಪರೀಕ್ಷೆ ಕುರಿತಂತೆ ಈಗ ಕೇಂದ್ರ ಆರೋಗ್ಯ ಸಚಿವಾಲಯ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸೂಚನೆ ನೀಡಿದೆ.
ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವ ಕಿರಾಣಿ ಅಂಗಡಿಯವರು, ತರಕಾರಿ ಮಾರಾಟಗಾರರು ಹಾಗೂ ಇತರ ವ್ಯಾಪಾರಿಗಳಿಗೆ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದ್ದು, ಜೊತೆಗೆ ಕೈಗಾರಿಕೆ, ಕೊಳಗೇರಿ ಪ್ರದೇಶ, ಕಾರಾಗೃಹ ಮತ್ತು ವೃದ್ಧಾಶ್ರಮಗಳಲ್ಲಿ ಈ ಪರೀಕ್ಷೆ ನಡೆಸಲು ಹೆಚ್ಚಿನ ಒತ್ತು ನೀಡಿ ಎಂದು ತಿಳಿಸಿದೆ.