ಧಾರವಾಡ: ಕೊರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಪರೀಕ್ಷೆ ನಡೆಸುತ್ತಿದ್ದ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಮೇಲೆ ಪೊಲೀಸರು ದಾಳಿ ನಡೆಸಿ ಪರೀಕ್ಷೆ ನಿಲ್ಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೂ ಅಲ್ಲದೇ ರ್ಯಾಂಕ್ ಬಂದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿ, ಸಂಸ್ಥೆ ಪರೀಕ್ಷೆ ನಡೆಸುತ್ತಿತ್ತು. ಬಹುಮಾನದ ಆಸೆಗಾಗಿ ನೂರಾರು ವಿದ್ಯಾರ್ಥಿಗಳು ಕೊರೊನಾ ಭೀಕರತೆ ನಡುವೆಯೂ ಜೀವದ ಹಂಗುತೊರೆದು ಪರೀಕ್ಷೆ ಬರೆಯಲು ಬಂದಿದ್ದಾರೆ. ಸ್ಪರ್ಧಾತ್ಮಕ ಮಾದರಿ ಪರೀಕ್ಷೆ ಇದಾಗಿದ್ದು, ಪ್ರಥಮ ಬಹುಮಾನವಾಗಿ 75,000 ರೂ. ದ್ವಿತೀಯ ಬಹುಮಾನ 50,000 ರೂ. ಹಾಗೂ ತೃತೀಯ ಬಹುಮಾನ 25,000 ರೂ. ಎಂದು ಅಕಾಡೆಮಿ ಘೋಷಿಸಿತ್ತು.
ಈ ಮೂಲಕ ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿದ್ದ ಧಾರವಾಡದ ಶ್ರೀನಗರ ವೃತ್ತದ ಬಳಿಯ ವಿದ್ಯಾಕಾಶಿ ಸಂಸ್ಥೆಯ ಮೇಲೆ ಇದೀಗ ಉಪನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಪರೀಕ್ಷೆ ನಿಲ್ಲಿಸಿದ್ದಾರೆ.