ಕೊರೊನಾ ಮಹಾಮಾರಿಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಸೋಂಕು ಇಳಿಮುಖವಾದರೂ ಜೀವನ ಮೊದಲಿನಂತಾಗುತ್ತಿಲ್ಲ. ಅನೇಕ ಉದ್ಯಮಗಳು ಇನ್ನೂ ಚೇತರಿಕೆ ಕಾಣುತ್ತಲೇ ಇವೆ. ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ ಖಾಸಗಿ ಬಸ್‌ಗಳ ಕಥೆಯೂ ಇದೇ ಆಗಿದೆ.
ಹೌದು, ಕೊರೊನಾದಿಂದಾಗಿ ಜನರಿಲ್ಲದೇ ಬಸ್‌ಗಳು ಬಿಕೋ ಎನ್ನುತ್ತಿವೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ಖರ್ಚುಗಳಿಗೂ ಆದಾಯ ಬರುತ್ತಿಲ್ಲ. ಇಂತದರಲ್ಲಿ ತೆರಿಗೆ ಕಟ್ಟೋದು ಹೇಗೆ ಎನ್ನುತ್ತಿದ್ದಾರೆ ಖಾಸಗಿ ಬಸ್ ಮಾಲೀಕರು.
ತೆರಿಗೆ ಕಟ್ಟಲಾಗದೇ ಖಾಸಗಿ ಬಸ್‌ಗಳ ದಾಖಲೆಗಳನ್ನು ಆರ್.ಟಿ.ಓ.ಗೆ ಒಪ್ಪಿಸುತ್ತಿದ್ದಾರೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನಡುವೆ ಓಡಾಡುತ್ತಿದ್ದ 150 ಕ್ಕು ಹೆಚ್ಚು ಖಾಸಗಿ ಬಸ್‌ಗಳು ಇದೀಗ ಆದಾಯವಿಲ್ಲದೆ ನಷ್ಟ ಅನುಭವಿಸುತ್ತಿವೆ.
150 ಬಸ್‌ಗಳ ಪೈಕಿ ಸುಮಾರು 125 ಬಸ್ ಮಾಲೀಕರು ತೆರಿಗೆ ಕಟ್ಟಲಾಗದೇ ಪರದಾಡುತ್ತಿದ್ದಾರೆ. ರೂಟ್‌ಗಳಿಗೆ ಬಸ್ ಹೋದರೆ ಜನರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಇಂಧನದ ನಷ್ಟ ಉಂಟಾಗುತ್ತಿರೋದ್ರ ಜೊತೆಗೆ ತೆರಿಗೆ ಕಟ್ಟೋದಿಕ್ಕೂ ಹಣ ಸಂದಾಯವಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಸ್‌ಗಳ ದಾಖಲೆಗಳನ್ನು ಆರ್‌ಟಿಓಗೆ ನೀಡಬೇಕಿದೆ ಎನ್ನುತ್ತಿದ್ದಾರೆ ಖಾಸಗಿ ಬಸ್ ಮಾಲೀಕರು.