ಕೊರೊನಾದಿಂದಾಗಿ ಉತ್ಸವಗಳನ್ನು ಈ ವರ್ಷ ಅತೀ ಸರಳವಾಗಿಯೇ ಆಚರಣೆ ಮಾಡಲಾಗುತ್ತಿದೆ. ಹೆಚ್ಚಿನ ಜನ ಸೇರದಂತೆ ಆಡಳಿತ ಮಂಡಳಿಗಳು ಉತ್ಸವಗಳನ್ನು ಏರ್ಪಡಿಸುತ್ತಿವೆ. ಇದೀಗ ಕೊರೊನಾ ಕರಿ ಛಾಯೆ ಹಂಪಿ ಉತ್ಸವದ ಮೇಲೂ ಬಿದ್ದಿದೆ.
ಮುಂದಿನ ತಿಂಗಳು ಅತೀ ಸರಳವಾಗಿ ಹಂಪಿ ಉತ್ಸವ ನಡೆಯಲಿದೆ. ಈ ಬಗ್ಗೆ ಚರ್ಚೆಗಳಾಗಿವೆ. ಕೊರೊನಾದಿಂದಾಗಿ ಮುಂದಿನ ತಿಂಗಳು ಸರಳವಾಗಿ ಹಂಪಿ ಉತ್ಸವ ನಡೆಯಲಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದಷ್ಟು ಬೇಗ ದಿನಾಂಕ ನಿಗದಿ ಮಾಡುತ್ತೇವೆ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.
ಕೊರೊನಾ ಒಂದು ಕಡೆಯಾದ್ರೆ, ಸಾಂಪ್ರದಾಯಿಕ ಉತ್ಸವಗಳು ಮತ್ತೊಂದು ಕಡೆ. ಆದರೆ ಹಿಂದಿನಿಂದ ನಡೆದುಕೊಂಡು ಬಂದ ಉತ್ಸವಗಳನ್ನು ಬಿಡಬಾರದು ಎಂಬ ಉದ್ದೇಶದಿಂದ ಸರಳ ಹಂಪಿ ಉತ್ಸವ ನಡೆಯಲಿದೆ. ದಸರಾವನ್ನು ಸರಳವಾಗಿಯೇ ಆಚರಣೆ ಮಾಡುತ್ತಿರೋದ್ರಿಂದ ಹಂಪಿ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಆನಂದ್ ಸಿಂಗ್ ಸಭೆ ನಡೆಸುವ ಸಾಧ್ಯತೆ ಇದೆ.