alex Certify ಕೊರೊನಾ ಎಫೆಕ್ಟ್: ಬೀದಿಗೆ ಬಿದ್ದ ಖಾಸಗಿ ಶಾಲಾ ಬಸ್ ಚಾಲಕ – ನಿರ್ವಾಹಕರ ಬದುಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎಫೆಕ್ಟ್: ಬೀದಿಗೆ ಬಿದ್ದ ಖಾಸಗಿ ಶಾಲಾ ಬಸ್ ಚಾಲಕ – ನಿರ್ವಾಹಕರ ಬದುಕು

ಬೆಂಗಳೂರು: ಕೊರೊನಾ ಮಹಾಮಾರಿ ಎಲ್ಲಾ ಕ್ಷೇತ್ರಗಳ ಜನರನ್ನು ಸಂಕಷ್ಟಕ್ಕೀಡುಮಾಡಿದೆ. ಅದರಲ್ಲೂ ಶೈಕ್ಷಣಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಕೊರೊನಾ ಮೊದಲ ಅಲೆಯಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಸರಿಯಾಗಿ ನಡೆಯದೇ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯನ್ನು ತೊಂದರೆಗೆ ಸಿಲುಕಿಸಿತ್ತು. ಇನ್ನೇನು ಶಾಲೆಗಳು ಆರಂಭವಾಗುತ್ತಿವೆ ಎನ್ನುವಷ್ಟಲ್ಲಿ ಎರಡನೇ ಅಲೆ ಆಘಾತ ಶಿಕ್ಷಕರ ಜೊತೆಗೆ ಖಾಸಗಿ ಶಾಲಾ ಬಸ್ ಚಾಲಕರು, ನಿರ್ವಾಹಕರನ್ನು ಬೀದಿಗೆ ಬೀಳುವಂತೆ ಮಾಡಿರುವುದು ಸುಳ್ಳಲ್ಲ.

ಕೊರೊನಾ ಎರಡನೇ ಅಲೆ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಅದರಲ್ಲೂ ಖಾಸಗಿ ಶಾಲೆಗಳ ಬಸ್ ಚಾಲಕರ, ನಿರ್ವಾಹಕರ ಸಂಕಷ್ಟವನ್ನು ಯಾರೂ ಕೇಳುವವರಿಲ್ಲದಂತಾಗಿದೆ. ಕುಟುಂಬ ನಿರ್ವಹಣೆ ಜೊತೆಗೆ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು, ಕೊರೊನಾದಿಂದಾಗಿ ಕಳೆದ ಬಾರಿ ಶಾಲೆಗಳು ಸರಿಯಾಗಿ ನಡೆದಿಲ್ಲ. ಅದೂ ಅಲ್ಲದೇ ಏಕಾಏಕಿ ಲಾಕ್ ಡೌನ್ ಜಾರಿಯಾಗಿ ಶಾಲೆಗಳು ಬಂದ್ ಆಗಿದ್ದರಿಂದ ಖಾಸಗಿ ಶಾಲೆ ಬಸ್ ಚಾಲಕರು – ನಿರ್ವಾಹಕರು ತೊಂದರೆಗೆ ಸಿಲುಕಿದರು.

ಕೋವಿಡ್‌ ಆಸ್ಪತ್ರೆಯಲ್ಲೊಂದು ಹೃದಯಸ್ಪರ್ಶಿ ಘಟನೆ…!

ಬರಬೇಕಾದ ಸಂಬಳವೂ ಬರಲಿಲ್ಲ. ಜೀವನ ನಿರ್ವಹಣೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟರಲ್ಲಿ ಲಾಕ್ ಡೌನ್ ತೆರವುಗೊಂಡು ಇನ್ನೇನು ಶಾಲೆಗಳು ಆರಂಭವಾಗಲಿವೆ ಎನ್ನುವಷ್ಟರಲ್ಲಿ ಆನ್ ಲೈನ್ ಕ್ಲಾಸ್ ಆರಂಭವಾಯಿತು. ಅಲ್ಲಿಗೆ ಶಾಲೆ ಆರಂಭವಾಗಿ ಮತ್ತೆ ಸಂಬಳ ಸಿಗುವ ನಿರೀಕ್ಷೆಯಲ್ಲಿದ್ದ ಬಸ್ ಚಾಲಕರು, ನಿರ್ವಾಹಕರಿಗೆ ಮತ್ತೊಂದು ಆಘಾತವಾಗಿದೆ.

ಕೆಲಸವೂ ಇಲ್ಲ, ಸಂಬಳವೂ ಇಲ್ಲ, ಸಂಕಷ್ಟವನ್ನು ಕೇಳುವವರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಶಾಲೆಗಳು ಸಂಪೂರ್ಣ ಬಂದ್ ಆಗಿದೆ. ಇದರ ಬೆನ್ನಲ್ಲೇ ಬೇಸಿಗೆ ರಜೆ ಶುರುವಾಗಿದೆ. ಇನ್ನು ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಿ ಶಾಲೆಗಳು ಪ್ರಾರಂಭವಾದರೂ ಕೂಡ ಕೊರೊನಾತಂಕದಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಬಸ್ ಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ.

ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಧೈರ್ಯವಿಲ್ಲದಿರುವಾಗ ಇನ್ನು ಗುಂಪು ಗುಂಪಾಗಿ ಶಾಲಾ ಬಸ್ ನಲ್ಲಿ ಮಕ್ಕಳು ತೆರಳಲು ತಂದೆ-ತಾಯಿ ಬಿಟ್ಟಾರೆಯೇ? ಹೀಗಿರುವಾಗ ಶಾಲೆ ಆರಂಭವಾದರೂ ಖಾಸಗಿ ಶಾಲಾ ಬಸ್ ಚಾಲಕರು, ನಿರ್ವಾಹಕರಿಗೆ ಕೆಲಸದ ಮಾತು ದೂರದ ವಿಷಯ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಖಾಸಗಿ ಶಾಲಾ ಬಸ್ ನ್ನೇ ನಂಬಿಕೊಂಡಿರುವ ಚಾಲಕರು, ನಿರ್ವಾಹಕರ ಬದುಕು ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...