ಕೊರೊನಾದಿಂದಾಗಿ ಜನಜೀವನ ಬೀದಿಗೆ ಬಿದ್ದಿದೆ. ಇದರಿಂದ ಎಷ್ಟೋ ಲಕ್ಷ ಜನ ಬಡತನವನ್ನು ಅನುಭವಿಸುತ್ತಿದ್ದಾರೆ. ಅಷ್ಟೆ ಯಾಕೆ ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಬೇರೆ ಬೇರೆ ಮೂಲಗಳಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಿದ್ದ ಆದಾಯದಲ್ಲೂ ಇದೀಗ ಕೊರತೆ ಉಂಟಾಗಿದೆ.
ಇನ್ನು ರಾಜ್ಯಕ್ಕೆ ಬರುತ್ತಿದ್ದ ಆದಾಯ ಮೂಲಗಳಲ್ಲಿ ದೇವಸ್ಥಾನ ಕೂಡ ಒಂದು. ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳಿಂದ ರಾಜ್ಯಕ್ಕೆ ಕೋಟ್ಯಾಂತರ ಹಣ ಸಂಗ್ರಹವಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಇದಕ್ಕೂ ಹೊಡೆತ ಬಿದ್ದಿದೆ.
ಕೊರೊನಾದಿಂದ ಈ ವರ್ಷದಲ್ಲಿ ದೇವಸ್ಥಾನಗಳು ತೆರೆದಿದ್ದಕ್ಕಿಂತ ಮುಚ್ಚಿದ್ದ ದಿನಗಳೇ ಹೆಚ್ಚು. ಇನ್ನು ಲಾಕ್‌ಡೌನ್ ವಿನಾಯ್ತಿ ನೀಡಿ ದೇವಸ್ಥಾನ ತೆರೆದರೂ ಭಕ್ತರು ದೇವಸ್ಥಾನಕ್ಕೆ ಬರುತ್ತಿಲ್ಲ. ಹೀಗಿರುವಾಗ ಕಾಣಿಕೆ ಹಣ ಕೂಡ ಸಂಗ್ರಹವಾಗುತ್ತಿಲ್ಲ. ಕಳೆದ ಆರ್ಥಿಕ ವರ್ಷದಲ್ಲಿ 317 ಕೋಟಿ ಹಣ ಸಂಗ್ರಹವಾಗಿತ್ತು. ಆದರೆ ಏಪ್ರಿಲ್‌ನಿಂದ ಜುಲೈವರೆಗಿನ ಲೆಕ್ಕ ನೋಡಿದರೆ ಕೇವಲ 18 ಕೋಟಿ ಆದಾಯ ಸಂಗ್ರಹವಾಗಿದೆ. ದೊಡ್ಡ ಮಟ್ಟದಲ್ಲಿ ದೇವಸ್ಥಾನಗಳ ಆದಾಯಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ.