ಚಿಕ್ಕಮಗಳೂರು: ಕೊರೊನಾ ಮಹಾಮಾರಿ ಜನರಲ್ಲಿ ಆತಂಕದ ಜೊತೆಗೆ ಜೀವನದಲ್ಲಿ ಜಿಗುಪ್ಸೆಯನ್ನು ತರುವಂತೆ ಮಾಡುತ್ತಿದೆ. ಕೊರೊನಾ ಸೋಂಕಿನಿಂದ ಮನನೊಂದ ನಿವೃತ್ತ ಉಪತಹಶೀಲ್ದಾರ್ ಓರ್ವರು ಡೆತ್ ನೋಟ್ ಬರೆದಿಟ್ಟು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ.
ಸೋಮಾ ನಾಯಕ್ (72) ಆತ್ಮಹತ್ಯೆ ಮಾಡಿಕೊಂಡಿರುವ ನಿವೃತ ಉಪತಹಶೀಲ್ದಾರ್. ತನ್ನಿಂದಲೇ ತನ್ನ ಮಕ್ಕಳು, ಮೊಮ್ಮಕ್ಕಳಿಗೂ ಕೊರೊನಾ ಸೋಂಕು ಹರಡುವಂತಾಯಿತು. ನನಗೆ ಜೀವನ ಸಾಕಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕಾರಿನಲ್ಲಿಯೇ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.
ಕೊರೊನಾ ಭಯ ಮರೆಸುತ್ತೆ ಈ ವಿಡಿಯೋ
ನನಗೆ ಕೊರೊನಾ ಸೋಂಕು ತಗುಲಿದ್ದು, ನನ್ನ ಮಕ್ಕಳು, ಮೊಮ್ಮಕ್ಕಳಿಗೂ ನನ್ನಿಂದಲೇ ಸೋಂಕು ಹರಡುವಂತಾಯಿತು. ನನಗೆ ವಯಸ್ಸಾಗಿದೆ ಬದುಕುವ ಭರವಸೆ ಕಡಿಮೆ. ನನ್ನ ಕಣ್ಣೆದುರೇ ಮಕ್ಕಳು, ಮೊಮ್ಮಕ್ಕಳಿಗೆ ಏನಾದರೂ ಆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ. ಕೊರೊನಾ ಪಾಸಿಟಿವ್ ಇರುವುದರಿಂದ ನನ್ನ ಅಂತ್ಯಕ್ರಿಯೆಗೂ ಜಾಗ ಆರಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಜೀವನಕ್ಕೂ ದಾರಿ ಮಾಡಿದ್ದೇನೆ. ನನ್ನಿಂದ ಕುಟುಂಬಸ್ಥರಿಗೆ ತೊಂದರೆಯಾಗಬಾರದು ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತಹತ್ಯೆ ಮಾಡಿಕೊಂಡಿದ್ದಾರೆ. ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.