ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಜೀವ ಬಲಿ ಪಡೆದಿದೆ. ಲಕ್ಷಾಂತರ ಮಂದಿ ಸೋಂಕು ಪೀಡಿತರಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾಗೆ ಇನ್ನೂ ಲಸಿಕೆ ಲಭ್ಯವಾಗದ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದೊಂದೇ ಸದ್ಯಕ್ಕಿರುವ ಮಾರ್ಗ.
ಕೊರೊನಾದಿಂದ ಭಯಭೀತಿಗೊಳಗಾಗಿರುವ ಸಾರ್ವಜನಿಕರಿಗೆ ಖ್ಯಾತ ವೈದ್ಯ ರಾಜು ತಮ್ಮ ವಿಡಿಯೋಗಳ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡಿಕೊಂಡು ಬಂದಿದ್ದು, ಶ್ರೀ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸುತ್ತಿದ್ದಾರೆ. ಕೊರೊನಾ ಕುರಿತು ಯಾವುದೇ ಆತಂಕ ಬೇಡ. ಭಯವನ್ನು ಮೊದಲು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ ಎಂದು ಡಾ. ರಾಜು ಆರಂಭದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ.
ಇದರ ಮಧ್ಯೆ ಸಾರ್ವಜನಿಕರ ಕೆಲವೊಂದು ಪ್ರಶ್ನೆಗಳಿಗೂ ಡಾ. ರಾಜು ಉತ್ತರ ನೀಡುತ್ತಿದ್ದು, ಆತಂಕಗೊಂಡವರಿಗೆ ಸಾಂತ್ವನ ನೀಡುತ್ತಿದ್ದಾರೆ. ಇದೀಗ ಮತ್ತೊಂದು ವಿಡಿಯೋವನ್ನು ಡಾ. ರಾಜು ಬಿಡುಗಡೆ ಮಾಡಿದ್ದು, ಇದರಲ್ಲಿ ವೈದ್ಯರುಗಳು ಕೊರೊನಾದಿಂದ ಸಾವನ್ನಪ್ಪುತ್ತಿರುವುದರ ಹಿಂದಿನ ಕಾರಣಗಳೇನು ..? ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು …? ಎಂಬುದನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.facebook.com/106521611130177/videos/270708977253929