ಬೆಂಗಳೂರು: ಕೊರೊನಾ ಸೋಂಕು ಗರ್ಭಿಣಿಯರ ಜೀವವನ್ನೇ ಬಲಿ ಪಡೆಯುತ್ತಿದ್ದು, ಕೊರೊನಾ ಸೋಂಕಿತ 8 ತಿಂಗಳ ಗರ್ಭಿಣಿ ಮಹಾಮಾರಿಗೆ ಬಲಿಯಾಗಿದ್ದಾರೆ. ತಾಯಿಯ ಗರ್ಭದಲ್ಲಿದ್ದ ಮಗುವನ್ನು ವೈದ್ಯರು ರಕ್ಷಿಸಿರುವ ಘಟನೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಡೆದಿದೆ.
ಶಿಕಾರಿಪುರ ತಾಲ್ಲೂಕಿನ ನೋಡಬಹುದಾದ ಪ್ರಮುಖ ಪ್ರವಾಸಿ ತಾಣಗಳು
ಅಶ್ವಿನಿ ಎಂಬ 8 ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿತ್ತು. ದೊಡ್ಡಬಳ್ಳಾಪುರ ಆಸ್ಪತ್ರೆಯಿಂದ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ಉಸಿರಾಟದ ತೊಂದರೆ ಕೆಮ್ಮಿನಿಂದ ಬಳಲುತ್ತಿದ್ದ ಅಶ್ವಿನಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಹದಗೆಡುತ್ತಿತ್ತು. ಬೇರೆ ದಾರಿಯಿಲ್ಲದೇ ವೈದ್ಯರು 8 ತಿಂಗಳ ಗರ್ಭಿಣಿಗೆ ಆಪರೇಷನ್ ಮಾಡಿ ಮಗುವನ್ನು ಹೊರತೆಗೆದಿದ್ದಾರೆ. ಮಗು ಸುರಕ್ಷಿತವಾಗಿದೆ ಆದರೆ ಮಗುವಿಗೆ ಜನ್ಮ ನೀಡಿದ ಮೂರೇ ದಿನಕ್ಕೆ ಇದೀಗ ಅಶ್ವಿನಿ ಸಾವನ್ನಪ್ಪಿದ್ದಾರೆ.
ʼಕೊರೊನಾʼ ಚಿಕಿತ್ಸೆ ಪಡೆಯುತ್ತಿರುವ ತಾಯಿಗೆ ಮಕ್ಕಳ ಭಾವಪೂರ್ಣ ಪತ್ರ
ಹಸುಗೂಸಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾಗೆ ಬಲಿಯಾದ ಅಶ್ವಿನಿಗೆ ಮೂರು ವರ್ಷದ ಇನ್ನೋರ್ವ ಹೆಣ್ಣು ಮಗುವಿದ್ದು, ನವಜಾತ ಶಿಶುವಿನ ಜೊತೆಗೆ ಮೂರು ವರ್ಷದ ಕಂದಮ್ಮ ಕೂಡ ಈಗ ಅನಾಥವಾಗಿದೆ.