ದೇಶದಲ್ಲಿ ಕಳೆದ 13ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 80 ರೂಪಾಯಿ ಸಮೀಪಿಸಿದ್ದು, ಇದರ ಮಧ್ಯೆ ಮೈಸೂರಿನಲ್ಲಿ ಕೇವಲ 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕಲಾಗಿದೆ.
ಹೌದು, ಶುಕ್ರವಾರದಂದು ಮೈಸೂರಿನ ಕುವೆಂಪು ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಕೂಟರ್ ಒಂದಕ್ಕೆ 25 ರೂಪಾಯಿ ಬೆಲೆಯಲ್ಲಿ ಒಂದು ಲೀಟರ್ ಪೆಟ್ರೋಲ್ ಹಾಕಿದ್ದಾರೆ. ಅಂದಹಾಗೆ ಈ ರೀತಿ ಮಾಡಿರುವುದು ವಿನೂತನ ರೀತಿಯ ಪ್ರತಿಭಟನೆಗಾಗಿ.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿಲ್ಲವಾದರೂ ಕೇಂದ್ರ ಸರ್ಕಾರ ವಿವಿಧ ತೆರಿಗೆಗಳನ್ನು ಹೇರಿರುವುದರಿಂದ 80 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಲಾಗುತ್ತಿದೆ ಎಂದು ಹೇಳಿರುವ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಬಡವರ ಕಷ್ಟ ತಿಳಿಯುತ್ತಿಲ್ಲ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕಿದ್ದಾರೆ.