ತುಮಕೂರು ಜಿಲ್ಲೆಯಲ್ಲಿ ಕುರಿಗಾಯಿ ಓರ್ವರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಅವರು ಸಾಕಿದ್ದ ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು.
ಅಲ್ಲದೆ ಕುರಿಗಳ ಸ್ಯಾಂಪಲ್ ತೆಗೆದು ಗಂಟಲು ದ್ರವ ಪರೀಕ್ಷೆಗಾಗಿ ಅದನ್ನು ಬೆಂಗಳೂರು, ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಇದೀಗ ಇದರ ವರದಿ ಬಂದಿದ್ದು, ನೆಗೆಟಿವ್ ಎಂದು ಹೇಳಲಾಗಿದೆ. ಹೀಗಾಗಿ ಈ ಕುರಿಗಳನ್ನು ಯಾವುದೇ ಭಯವಿಲ್ಲದೆ ಸಾಕಬಹುದು ಹಾಗೂ ಮಾಂಸ ತಿನ್ನಬಹುದು ಎಂದು ಪಶುಪಾಲನಾ ಇಲಾಖೆಯ ಡಾ. ಕೆ.ಜಿ. ನಂದೀಶ್ ತಿಳಿಸಿದ್ದಾರೆ.