
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡಬ್ಬಿಂಗ್ ಧಾರವಾಹಿಗಳಾದ ‘ರಾಧಾಕೃಷ್ಣ’ ಹಾಗೂ ‘ಮಹಾಭಾರತ’ ಸೀರಿಯಲ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ರಾಧಾಕೃಷ್ಣ’ ಧಾರಾವಾಹಿಯ ಕೃಷ್ಣನ ಪಾತ್ರಧಾರಿ ಸುಮೇದ್ ರನ್ನು ನೋಡಲು ಹಾವೇರಿಯ 8ನೇ ತರಗತಿ ಬಾಲಕನೊಬ್ಬ ಬಸ್ ಹತ್ತಿ ಮುಂಬೈಗೆ ಹೋಗಿದ್ದಾನೆ.
ಬಾಲಕ ಡೈಲಾಗ್ ಸಹ ಬರೆದುಕೊಂಡಿದ್ದಾನೆ. ಮುಂಬೈಗೆ ಹೋದ ಬಾಲಕ ಆಟೋಚಾಲಕನಿಗೆ ಸುಮೇದ್ ಹತ್ತಿರ ಕರೆದುಕೊಂಡು ಹೋಗಲು ಹೇಳಿದ್ದಾನೆ. ಆಗ ಅನುಮಾನಗೊಂಡ ಆಟೋಚಾಲಕ ಬಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಪೋಷಕರಿಗೆ ವಿಷಯ ತಿಳಿಸಿ ಅವರ ಬಳಿ ಒಪ್ಪಿಸಿದ್ದಾರೆ.
