ಕಿರಿ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಪುಟ್ಟ ಪೋರಿಯೊಬ್ಬಳ ಹೆಸರು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ.
ಶಿವಮೊಗ್ಗ ನಿವಾಸಿ ಟೆರೆನ್ಸ್ ಹಾಗೂ ರಕ್ಷಿತಾ ದಂಪತಿಯ ಎರಡೂವರೆ ವರ್ಷದ ಪುತ್ರಿ ತನೀಷಾ ತನ್ನ ಸಾಧನೆಗಾಗಿ ‘ಇಂಡಿಯ ಬುಕ್ ಅಫ್ ರೆಕಾರ್ಡ್’ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾಳೆ.
ತಿಂಗಳು, ವಾರ, ಗ್ರಹ ರಾಷ್ಟ್ರೀಯ ಲಾಂಛನ ಮೊದಲಾದವುಗಳನ್ನು ಗುರುತಿಸುವ ಜೊತೆಗೆ ಇಂಗ್ಲಿಷ್ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಒಂದು ಪದ ಹೇಳುತ್ತಾಳೆ ಈ ಪುಟ್ಟ ಬಾಲೆ.