ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಬಹು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರೆಯುತ್ತಲೇ ಇದೆ. ಇತರ ಖರ್ಚುಗಳಿಂದ ಈಗಾಗಲೇ ನಷ್ಟ ಅನುಭವಿಸುತ್ತಿರುವ ಪಾಲಿಕೆಗೆ ಕಸ ನಿರ್ವಹಣೆಯಲ್ಲೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಷ್ಟವನ್ನು ಭರಿಸೋದಿಕ್ಕೆ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ ಪಾಲಿಕೆ.
ಹೌದು, ಕಸ ವಿಲೇವಾರಿಯಲ್ಲಿ ಆಗುತ್ತಿರುವ ನಷ್ಟವನ್ನು ತುಂಬಿಸೋದಿಕ್ಕೆ ಭರ್ಜರಿ ಪ್ಲಾನ್ ಮಾಡಿರುವ ಬಿಬಿಎಂಪಿ ನಗರದ ಪ್ರತಿ ಮನೆಯಿಂದ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ 200 ರೂಪಾಯಿ ಪಡೆಯಲು ಯೋಚನೆ ಮಾಡಿದೆ. ಈಗಾಗಲೇ ಗಾರ್ಬೇಜ್ ಸೆಸ್ ಕಲೆಕ್ಟ್ ಮಾಡುತ್ತಿರುವ ಪಾಲಿಕೆ ಇದರ ಜೊತೆಗೆ ಹೆಚ್ಚುವರಿ ಹಣವನ್ನು ಸಂಗ್ರಹಿಸೋದಿಕ್ಕೆ ಚಿಂತನೆ ನಡೆಸಿದೆ.
ಇನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಕಸ ನಿರ್ವಹಣೆಗೆ ಅಂತಾನೆ 1 ಸಾವಿರ ಕೋಟಿ ಖರ್ಚಾಗುತ್ತಿದೆ. ಇದು ಪಾಲಿಕೆಗೆ ಹೊಡೆತ ಬಿದ್ದಿದೆ. ಈಗಾಗಲೇ ಗಾರ್ಬೇಜ್ ಸೆಸ್‌ನಿಂದ ಕೇವಲ 50 ರಿಂದ 54 ಕೋಟಿ ಹಣ ಬರುತ್ತಿದೆ. ಹೀಗಾಗಿ ಕಸ ನಿರ್ವಹಣೆಗೂ ಹಣ ಸಂಗ್ರಹಣೆ ಅನಿವಾರ್ಯವಾಗಿದೆ.