ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಇನ್ಮುಂದೆ ಯಾವುದೇ ಮೇಲ್ಮನವಿ ಹಾಗೂ ದೂರು ಅರ್ಜಿ ಸ್ವೀಕರಿಸದೇ ಇದ್ದರೂ, 7 ವರ್ಷದ ವರೆಗೆ ಅರ್ಜಿ ವಿಚಾರಣೆ ನಡೆಸಬಹುದು. ಇದಕ್ಕೆ ಮುಖ್ಯ ಕಾರಣ, ಈಗಿರುವ ದೂರು ಅರ್ಜಿಗಳ ವಿಚಾರಣೆ. ಈಗಿರುವ ಅರ್ಜಿ ವಿಚಾರಣೆ ಮಾಡಿ ತೀರ್ಪು ನೀಡಲು ಕನಿಷ್ಟ ಎಂದರೂ 7 ವರ್ಷ ಬೇಕಂತೆ.
ಹೌದು, 2018ರ ವರೆಗೆ ನೀಡಿರುವ ದೂರು ಅರ್ಜಿಗಳ ವಿಚಾರಣೆ ಬಾಕಿ ಇದ್ದು ಅವುಗಳನ್ನು ವಿಚಾರಣೆ ಮಾಡಿದರೆ ಸುಮಾರು 7 ವರ್ಷದ ವರೆಗೆ ಸಮಯ ತೆಗೆದುಕೊಳ್ಳುತ್ತಂತೆ. 10,578 ಅರ್ಜಿ ವಿಚಾರಣೆಗಳು ಬಾಕಿ ಇದ್ದು ಅವುಗಳನ್ನು ವಿಚಾರಣೆ ಮಾಡಲು ಇಷ್ಟು ಸಮಯ ಬೇಕು ಅಂತ ವಿಧಿ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಇಷ್ಟು ಪ್ರಕರಣ ಬಾಕಿ ಉಳಿಯಲು ಮುಖ್ಯವಾಗಿ ಕಾರಣವಾಗಿದ್ದು ವಿಚಾರಣೆಯನ್ನು ಮುಂದೂಡಿಕೆ ಮಾಡುತ್ತಿರುವುದು. ಹಾಗು ಅಂತಿಮ ತೀರ್ಪನ್ನು ಪ್ರಕಟಿಸೋದಕ್ಕೆ ವಿಳಂಬವಾಗುತ್ತಿರುವುದು. ಇನ್ನು ಇಷ್ಟು ಪ್ರಕರಣಗಳ ಪೈಕಿ ವಿಮೆ, ಬ್ಯಾಂಕಿಂಗ್ ವಲಯ ಹಾಗೂ ವಸತಿಗೆ ಸಂಬಂಧಪಟ್ಟವೇ ಹೆಚ್ಚಾಗಿವೆಯಂತೆ.