alex Certify ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆದರೆ…..; ಮರಾಠ ಪ್ರಾಧಿಕಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆದರೆ…..; ಮರಾಠ ಪ್ರಾಧಿಕಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದೇನು…?

ಚಿಕ್ಕಮಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ರಾಜ್ಯದಲ್ಲಿ ಎಲ್ಲಾ ಸಮುದಾಯದವರೂ ಇದ್ದಾರೆ. ಹಲವು ನಿಗಮ, ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಯ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಮರಾಠ ಅಭಿವೃದ್ಧಿ ನಿಗಮದಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ರಾಜ್ಯದಲ್ಲಿ ಹತ್ತಾರು ಅಭಿವೃದ್ಧಿ ನಿಗಮಗಳಿವೆ ಅಲ್ಪಸಂಖ್ಯಾತ, ಭೋವಿ, ಅಂಬೇಡ್ಕರ್, ಉಪ್ಪಾರ ಹೀಗೆ ಅನೇಕ ನಿಗಮಗಳಿವೆ. ಹಾಗಾದರೆ ಇವೆಲ್ಲ ಯಾಕೆಬೇಕು? ಮರಾಠ ಅಭಿವೃದ್ಧಿ ನಿಗಮದ ಬಗ್ಗೆ ವಿರೋಧ ಮಾಡಿದವರು ಟಿಪ್ಪು ಜಯಂತಿ ಆಚರಣೆ ಮಾಡುವಾಗ ಯಾಕೆ ಸುಮ್ಮನಿದ್ದರು? ಟಿಪ್ಪು ಕನ್ನಡ ಪ್ರೇಮಿನಾ ಎಂದು ಪ್ರಶ್ನಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮರಾಠಿಗರಿದ್ದಾರೆ. ಹೀಗಾಗಿ ಅವರ ಅಭಿವೃದ್ಧಿಗಾಗಿ ಪ್ರಾಧಿಕಾರ ಸ್ಥಾಪಿಸಲಾಗಿದೆ. ಈಗ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆದರೂ ಹಲವು ಭಾಷೆಗಳ ಅಕಾಡೆಮಿಗಳನ್ನು ತೆರೆದಿದ್ದಿದ್ದೇವೆ. ಅದರಂತೆಯೇ ಮರಾಠ ಪ್ರಾಧಿಕಾರ ರಚನೆಯಾಗಿದೆಯಷ್ಟೇ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...