alex Certify ಕನ್ನಡದ ಖ್ಯಾತ ಆಂಕರ್ ಕಂ ನಟಿಗೂ ಡ್ರಗ್ಸ್ ಪಾರ್ಟಿಯ ನಂಟು: ಬಂಧಿತ ಡಾನ್ಸರ್ ಬಾಯ್ಬಿಟ್ಟ ಸತ್ಯವೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದ ಖ್ಯಾತ ಆಂಕರ್ ಕಂ ನಟಿಗೂ ಡ್ರಗ್ಸ್ ಪಾರ್ಟಿಯ ನಂಟು: ಬಂಧಿತ ಡಾನ್ಸರ್ ಬಾಯ್ಬಿಟ್ಟ ಸತ್ಯವೇನು…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧನಕ್ಕೀಡಾಗಿರುವ ಪ್ರಮುಖ ಡ್ರಗ್ ಪೆಡ್ಲರ್ ಡಾನ್ಸರ್ ಕಿಶೋರ್ ಶೆಟ್ಟಿ, ಕನ್ನಡದ ಖ್ಯಾತ ಆಂಕರ್ ಕಂ ನಟಿಗೂ ತನಗೂ ನಂಟಿರುವುದಾಗಿ ಹಾಗೂ ಆಕೆಯೂ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಡ್ರಗ್ಸ್ ಸಮೇತ ಸಿಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಈತ ಹಲವಾರು ಮಾಹಿತಿಗಳನ್ನು ಹೊರಹಾಕಿದ್ದಾನೆ. ಕನ್ನಡದ ಖ್ಯಾತ ಆಂಕರ್ ಕಂ ನಟಿಯೊಬ್ಬರ ಜೊತೆ ತನಗೆ ಕಳೆದ 5 ವರ್ಷಗಳಿಂದ ನಂಟಿದ್ದು, ಮುಂಬೈಗೂ ಕೂಡ ಆಕೆ ಬರುತ್ತಿದ್ದರು ಎಂದಿದ್ದಾನೆ.

ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ಪಾರ್ಟಿಯಲ್ಲೂ ಆಕೆ ಭಾಗಿಯಾಗಿದ್ದರು. ಹಲವು ರಿಯಾಲಿಟಿ ಶೋ ಹಾಗೂ ಬಿಗ್ ಬಾಸ್ ನಲ್ಲೂ ಕೂಡ ಆಕೆ ಭಾಗಿಯಾಗಿದ್ದಾಗಿ ಹೇಳಿದ್ದಾನೆ. ಡ್ರಗ್ಸ್ ಮಾರಾಟದಿಂದಲೇ ಕಿಶೋರ್ ಹಣಗಳಿಸುತ್ತಿದ್ದ ಎನ್ನಲಾಗಿದೆ. ಕಿಶೋರ್ ಶೆಟ್ಟಿ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆಂಕರ್ ಕಂ ನಟಿಗೂ ಕೂಡ ನೋಟೀಸ್ ನೀಡುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...