alex Certify ಕಣ್ಮನ ಸೆಳೆಯುತ್ತೆ ಕನ್ಯಾಡಿಯ ಶ್ರೀ ರಾಮ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮನ ಸೆಳೆಯುತ್ತೆ ಕನ್ಯಾಡಿಯ ಶ್ರೀ ರಾಮ ದೇಗುಲ

ದಕ್ಷಿಣ ಭಾರತದ ಅಯೋಧ್ಯೆಯೆಂದೇ ಪ್ರಖ್ಯಾತಿ ಪಡೆದಿರುವ ಕನ್ಯಾಡಿಯ ಶ್ರೀ ರಾಮ ಕ್ಷೇತ್ರ ತುಂಬಾ ಆಕರ್ಷಣೀಯವಾದ ಸ್ಥಳವಾಗಿದೆ. ಇದು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ 4 ಕಿ.ಮೀ. ದೂರದಲ್ಲಿದೆ. ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಈ ದೇವಾಲಯದ ಸೌಂದರ್ಯವನ್ನು ಹಾಗೂ ಕರುಣಾಮೂರ್ತಿ ರಾಮನನ್ನು ಕಣ್ತುಂಬಿಸಿಕೊಳ್ಳಲು ಭೇಟಿ ನೀಡುತ್ತಾರೆ.

ದಕ್ಷಿಣೋತ್ತರ ಶಿಲ್ಪಕಲಾ ಶೈಲಿಯಲ್ಲಿ ಕಂಗೊಳಿಸುತ್ತಿರುವ ಶ್ರೀ ರಾಮ ಕ್ಷೇತ್ರ ನೋಡುವುದಕ್ಕೆ ಕೂಡ ಅದ್ಭುತವಾಗಿದೆ. ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳು ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಒಂದು ದಿನ ಇಲ್ಲಿ ತಂಗಿದ್ದರು, ಈ ಸ್ಥಳದಲ್ಲಿ ದೇವ ಶ್ರೀ ರಾಮನ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ಅಂದುಕೊಂಡು ಅದನ್ನು ನನಸಾಗಿಸಿದರು.

ಇಲ್ಲಿನ ಮುಖ್ಯ ದೇವರು ಶ್ರೀ ರಾಮ. ಇಲ್ಲಿ ಒಂದೇ ಸೂರಿನಡಿಯಲ್ಲಿ ಇತರ 36 ದೇವರ ಗರ್ಭಗುಡಿಗಳಿವೆ. ದೇವಾಲಯದ ವಿನ್ಯಾಸ ಕಲಾತ್ಮಕ ಸೌಂದರ್ಯದೊಂದಿಗೆ ನೋಡುವುದಕ್ಕೆ ಆಕರ್ಷಕವಾಗಿದೆ. ಈ ಸುಂದರ ದೇಗುಲದಲ್ಲಿ ಹನುಮಂತ, ನವದುರ್ಗೆಯರು ಮತ್ತು ನವಗ್ರಹಗಳು ಪೂಜಿಸಲ್ಪಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...