ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಮಾಡಾಯಿ ಕಾವುನಲ್ಲಿ ಭದ್ರಕಾಳಿ ದೇವಾಲಯವಿದೆ. ಇಲ್ಲಿ ಪಾರ್ವತಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳೆ ಎಂಬ ನಂಬಿಕೆ ಇದೆ.
ರಾತ್ರಿ ಎಂಟರ ಬಳಿಕ ದೇವಾಲಯದ ಆವರಣದಲ್ಲಿ ಯಾರೂ ಪ್ರದಕ್ಷಿಣೆ ಹಾಕುವಂತಿಲ್ಲ. ದೇವಾಲಯದ ಅರ್ಚಕರು ಹಾಗೂ ಕಾವಲುಗಾರರನ್ನು ಬಿಟ್ಟು ಬೇರಾರು ಇರುವ ಹಾಗೇ ಇಲ್ಲ. ಯಾಕೆಂದರೆ ಈ ಹೊತ್ತಿನಲ್ಲಿ ಇಲ್ಲಿ ದೇವಿ ಪಾರ್ವತಿ ಸಂಚರಿಸುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಹಾಗೇ ಈ ಆವರಣದ ಒಳಗೆ ಐದು ದೇವಾಲಯಗಳಿವೆ. ಇಲ್ಲಿ ಶಿವನು ಪೂರ್ವಕ್ಕೆ ಮುಖ ಮಾಡಿದ್ದರೆ ಭದ್ರಕಾಳಿ ಪಶ್ಚಿಮಕ್ಕೆ ಮುಖ ಮಾಡಿದ್ದಾಳೆ. ಕೋಟಿ ಕಲಶಂ ಪೂಜೆ ನಡೆಯುವಾಗ ಇಲ್ಲಿ ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ಕೋಳಿ ಮಾಂಸವನ್ನು ನೀಡಲಾಗುತ್ತದೆ. ಶತ್ರು ಸಂಹಾರದ ಸಂಕೇತವಾಗಿ ಇಲ್ಲಿ ಬಂಗಾರದ ಕವಚದ ಖಡ್ಗವಿದೆ. ವರ್ಷಕ್ಕೊಮ್ಮೆ ಹೊರತೆಗೆದು ಪೂಜೆ ಸಲ್ಲಿಸಿ ಮತ್ತೆ ಅಲ್ಲೇ ಇಡಲಾಗುತ್ತದೆ. ಹಿಂದೆ ರಾಜರು ಯುದ್ಧಕ್ಕೆ ಹೋಗುವ ಮುನ್ನ ಇದಕ್ಕೆ ಪೂಜೆ ಸಲ್ಲಿಸುತ್ತಿದ್ದರಂತೆ.