ಒಳ ಉಡುಪು ಕದಿಯುವ ವಿಕೃತ ಕಾಮಿಗಳ ಬಗ್ಗೆ ಈ ಹಿಂದೆಯೂ ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ. ಇದೀಗ ಮತ್ತೊಬ್ಬ ವಿಕೃತ ಕಾಮಿ ಮಂಗಳೂರಿನಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಮಹಿಳಾ ಪಿಜಿಗಳಿಗೆ ನುಗ್ಗಿ ಒಳ ಉಡುಪು ಕದಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಧರ್ಮದೇಟು ನೀಡಲಾಗಿದೆ.
ಹೌದು, ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಪಿಜಿಗೆ ಈತ ನುಗ್ಗುತ್ತಿದ್ದನಂತೆ. ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಎಂದು ಹೇಳಲಾಗುತ್ತಿದೆ. ಕಳೆದ ರಾತ್ರಿಯೂ ಪಿಜಿಗೆ ನುಗ್ಗಿದ್ದಾನೆ. ಈ ವೇಳೆ ನಿವಾಸಿಗಳ ಕೈಗೆ ಸಿಕ್ಕಾಕಿಕೊಂಡು ಸರಿಯಾಗಿ ಒದೆಸಿಕೊಂಡಿದ್ದಾನೆ.
ಇನ್ನು ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಕಳೆದೆರಡು ಬಾರಿಯೂ ಈತನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಈ ಬಾರಿ ಆತನ ವಿರುದ್ಧ ದೂರು ದಾಖಲು ಮಾಡಿಲ್ಲ ಎನ್ನಲಾಗಿದೆ.