ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನ ಎಂದರೆ ಕರಾವಳಿ ಭಾಗದವರಿಗೆ ಭಕ್ತಿ ಭಾವದ ಸಂಗಮ ಸ್ಥಾನ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಗ್ರಾಮದಲ್ಲಿದೆ. ಇಲ್ಲಿ ಮೂಲ ದೇವಿ ರಾಜರಾಜೇಶ್ವರಿ. ಇದನ್ನು ಸುಮಾರು 8 ದಶಕಗಳ ಹಿಂದೆ ರಾಜ ಸುರಾತ ಎಂಬಾತ ನಿರ್ಮಿಸಿದ.
ಈ ದೇವಸ್ಥಾನ ಹಿಂದೂ ವಾಸ್ತು ಶೈಲಿಯನ್ನು ಹೊಂದಿದ್ದು, ದೇವತೆಗಳ ಮತ್ತು ತಾಮ್ರದ ಫಲಕಗಳ ಮರದ ಕೆತ್ತನೆಯಿಂದ ಅಲಂಕರಿಸಿರುವ ಛಾವಣಿಗಳನ್ನು ಚಿತ್ರಿಸುತ್ತದೆ.
ಈ ದೇವಾಲಯವನ್ನು ಆರಂಭದಲ್ಲಿ ಕರಗಿದ ಹಿತ್ತಾಳೆಯಿಂದ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಇಲ್ಲಿ ಸುಬ್ರಹ್ಮಣ್ಯ, ಭದ್ರಕಾಳಿ, ಮಹಾಗಣಪತಿ ಮತ್ತು ಸರಸ್ವತಿ ದೇವತೆಗಳ ಸಣ್ಣ ಮೂರ್ತಿಗಳಿವೆ.
ಶ್ರೀ ದೇವಿಯ ವಿಗ್ರಹವನ್ನು ಸಂಪೂರ್ಣವಾಗಿ ವಿಶೇಷ ಔಷಧೀಯ ಗುಣಲಕ್ಷಣಗಳೊಂದಿಗೆ ಜೇಡಿಮಣ್ಣಿನಿಂದ ತಯಾರಿಸಿರುವುದು ಇಲ್ಲಿನ ಮತ್ತೊಂದು ವಿಶೇಷ.
ಇಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಪೊಳಲಿ ಚೆಂಡು ಉತ್ಸವ ಇಲ್ಲಿನ ಮುಖ್ಯವಾದ ಪ್ರಕಾರವಾಗಿದ್ದು, ಒಂದು ತಿಂಗಳು ನಡೆಯುವ ಈ ಉತ್ಸವವನ್ನು ನೋಡಲೆಂದೇ ದೇಶ – ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ.
ದೇವಸ್ಥಾನ ಫಲ್ಗುಣಿ ನದಿಯ ತೀರದ ಕರಿಯಂಗಲ ಗ್ರಾಮದಲ್ಲಿದೆ. ದೇವಸ್ಥಾನದ ಸುತ್ತ ಭತ್ತದ ಗದ್ದೆಯಿದೆ. ಇದು ಮಂಗಳೂರು ನಗರದಿಂದ 16 ಕಿ.ಮೀ.ದೂರದಲ್ಲಿದೆ.