ಹೌದು ಈ ನಗರದಲ್ಲಿ ಯಾವುದುಂಟು, ಯಾವುದಿಲ್ಲ ಎಂದು ಹೇಳುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿನ ಪ್ರಮುಖ ತಾಣಗಳು ಹಾಗೂ ಅವುಗಳ ವಿಶೇಷತೆಯನ್ನು ತಿಳಿಯೋಣ
1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ನಿರ್ಮಿಸಿದ ಈ ಕಟ್ಟಡ ಹಿಂದೂ ವಾಸ್ತುಶೈಲಿಯಲ್ಲಿದೆ. 1902ರಲ್ಲಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಇಲ್ಲಿ ನಡೆಯಿತು. 1912ರಲ್ಲಿ ಅಂಬಾ ವಿಲಾಸ ಅರಮನೆ ನಿರ್ಮಾಣ ಆಗುವವರೆಗೆ ಒಡೆಯರ್ ವಂಶಸ್ಥರು ಈ ಅರಮನೆಯಲ್ಲಿ ವಾಸಿಸುತ್ತಿದ್ದರು.
ಲಲಿತ್ ಮಹಲ್ ಪ್ಯಾಲೆಸ್ ಬಾಂಬೆ ಮೂಲದ ವಾಸ್ತುಶಿಲ್ಪಿಯ ನೇತೃತ್ವದಲ್ಲಿ ನಿರ್ಮಾಣವಾಯಿತು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಯುರೋಪ್ ನಿಂದ ಆಗಮಿಸುತ್ತಿದ್ದ ಅತಿಥಿಗಳು ಉಳಿದುಕೊಳ್ಳುವ ಅತಿಥಿ ಗೃಹ ಇದಾಗಿತ್ತು.
ಇದು ಕೃಷ್ಣರಾಜಸಾಗರ ಜಲಾಶಯದ ಬಳಿಯಿರುವ ಅತ್ಯಂತ ಸುಂದರವಾದ ಉದ್ಯಾನವನವಾಗಿದೆ. ಮೈಸೂರಿನಿಂದ 19 ಕಿ.ಮೀ.ಗಳ ದೂರದಲ್ಲಿರುವ ಈ ಉದ್ಯಾನವನ 150 ಎಕರೆ ಪ್ರದೇಶದಲ್ಲಿ ಹರಡಿದ್ದು, ಭಾರತದಲ್ಲಿ ಅತ್ಯುತ್ತಮ ಉದ್ಯಾನವನಗಳಲ್ಲಿ ಒಂದು ಎಂದೇ ಗುರುತಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿ, ಸಾವಿರಾರು ಅಪರೂಪದ ಪಕ್ಷಿಗಳ ತಳಿ ಸಂವರ್ಧನೆ ಹಾಗೂ ವಾಸಸ್ಥಾನವಾಗಿರುವ ರಂಗನತಿಟ್ಟು, ಮೈಸೂರು ಮೃಗಾಲಯ, ಆಂಬಾವಿಲಾಸ ಅರಮನೆ, ಚಾಮುಂಡಿ ಬೆಟ್ಟ ಇಲ್ಲಿನ ಇತರ ಪ್ರಸಿದ್ಧ ಪ್ರವಾಸಿ ತಾಣಗಳು.