ಕೊರೊನಾ ಕಾರಣಕ್ಕೆ ಮಾರ್ಚ್ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಶಿಕ್ಷಣ ಸಂಸ್ಥೆಗಳು ಇನ್ನೂ ಆರಂಭವಾಗಿಲ್ಲ. ಆದರೆ ಪ್ರವೇಶಾತಿ ಕುರಿತಂತೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಐಟಿಐ ಪ್ರವೇಶಾತಿ ಬಯಸಿರುವ ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ.
ರಾಜ್ಯದಲ್ಲಿರುವ 270 ಸರಕಾರಿ ಹಾಗೂ 196 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳಿಗೆ 2020 ನೇ ಸಾಲಿನ ಪ್ರವೇಶಾತಿ ನಡೆಯುತ್ತಿದ್ದು, ಇದನ್ನು ಆನ್ಲೈನ್ ಮೂಲಕ ನಡೆಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆ ಹೊರಡಿಸಿದೆ.
ಇಲಾಖೆಯ ವೆಬ್ ಸೈಟ್ www.emptrg.kar.nic.in ನಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 17 ರಿಂದ ಆಗಸ್ಟ್ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ಇಲಾಖೆ ವೆಬ್ಸೈಟ್ ಸಂಪರ್ಕಿಸಬಹುದಾಗಿದೆ.