ಕೊರೊನಾ ಸೋಂಕು ದೇಶದ ಜನತೆಯನ್ನು ನಲುಗುವಂತೆ ಮಾಡಿದೆ. ಕಾಣದ ವೈರಸ್ ಗೆ ಹೆದರಿ ಮನೆಯಲ್ಲಿ ಕೂರಬೇಕಾದ ಪರಿಸ್ಥಿತಿ ಎಲ್ಲರಿಗೂ ಬಂದೊದಗಿದೆ. ಹೊರಗಿನ ವಸ್ತುಗಳನ್ನು ಏನನ್ನೇ ಕೊಂಡರು ಅದನ್ನು ಭಯದಲ್ಲಿ ಉಪಯೋಗಿಸುವಂತಾಗಿದೆ. ಇದೀಗ ಪ್ರಕೃತಿ ದತ್ತವಾಗಿ ಸಿಗುವ ಎಳನೀರಿನಿಂದಲೂ ಭಯ ಶುರುವಾಗಿದೆ.
ಹೌದು, ಮೈಸೂರಿನಲ್ಲಿ ಎಳನೀರು ವ್ಯಾಪಾರಿಗಳು ಎಳನೀರನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಕಾಯಿಯನ್ನು ಕೆತ್ತಿ ಕೊಡುತ್ತಿದ್ದಾರಷ್ಟೆ, ಎಳನೀರು ಕುಡಿದ ಮೇಲೆ ಗಂಜಿ ಕೇಳಬೇಡಿ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಕೊರೊನಾ ವೈರಸ್ ಅಂತೆ.
ಹೌದು, ಗ್ರಾಹಕರು ಎಳನೀರು ಕುಡಿಯುವಾಗ ಚಿಪ್ಪಿಗೆ ಬಾಯಿ ಹಾಕಿ ಕುಡಿಯುತ್ತಾರೆ. ನಂತರ ಅದರಲ್ಲಿನ ಗಂಜಿ ತೆಗೆಯಬೇಕು ಅಂದರೆ ವ್ಯಾಪಾರಸ್ಥರು ಅದನ್ನು ಮಚ್ಚಿನಿಂದ ಓಪನ್ ಮಾಡಬೇಕು. ಯಾರಿಗಾದರು ಗ್ರಾಹಕರಿಗೆ ವೈರಸ್ ಇದ್ದರೆ ಅದು ಮಚ್ಚಿಗೆ ತಗುಲಿ ವೈರಸ್ ಬೇರೆಯವರಿಗೂ ತಗಲಬಹುದು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಮೈಸೂರು ಪಾಲಿಕೆಯ ಮೌಕಿಕ ಆದೇಶ ಅಂತಲೂ ಹೇಳಲಾಗುತ್ತಿದೆ.