ಮಹೇಶ್ ಗೌಡ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾ ಮೊದಲನೇ ಹಂತದ ಚಿತ್ರೀಕರಣವನ್ನು ಈಗಾಗಲೇ ಚಿಕ್ಕಮಗಳೂರಿನಲ್ಲಿ ಮುಗಿಸಿದ್ದು, ಎರಡನೇ ಹಂತದ ಶೂಟಿಂಗ್ ಅನ್ನು ಬೆಂಗಳೂರಿನಲ್ಲಿ ನವೆಂಬರ್ 30ರಿಂದ ಶುರು ಮಾಡಲು ಚಿತ್ರತಂಡ ನಿರ್ಧರಿಸಿದೆ.
ಈ ಸಿನಿಮಾದಲ್ಲಿ ಮೇಘ ಶೆಟ್ಟಿ, ರಚನಾ ಇಂದರ್ ಹಾಗೂ ಅದಿತಿ ಪ್ರಭುದೇವ ಸೇರಿದಂತೆ ಒಟ್ಟು ಮೂವರು ನಾಯಕಿಯರು ಅಭಿನಯಿಸಿದ್ದು, ಪ್ರೇಕ್ಷಕರಲ್ಲಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.