ತುಮಕೂರು: ಶಿರಾ ಉಪಚುನಾವಣಾ ಅಖಾಡ ಇದೀಗ ನಿಜಕ್ಕೂ ರಂಗೇರಿದಂತಿದೆ. ಬಿಗ್ ಬಾಸ್ ಸೀಜನ್-4 ರನ್ನರ್ ಅಪ್ ದಿವಾಕರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಸ್ವತಃ ದಿವಾಕರ್ ಕೂಡ ಪ್ರತಿಕ್ರಿಯಿಸಿದ್ದು, ತಾನು ಶಿರಾ ಉಪಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ. ಸ್ಪರ್ಧೆ ಬಗ್ಗೆ ಇನ್ನೂ ಚರ್ಚೆ ನಡೆದಿದೆ. ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಬಿಗ್ ಬಾಸ್ ಸ್ಪರ್ಧಿ ಎಂದು ಜನ ನನಗೆ ವೋಟ್ ಹಾಕುವುದು ಬೇಡ. ಸಾಮಾನ್ಯ ವ್ಯಕ್ತಿ ಎಂಬ ಭಾವನೆಯಿಂದ ನನಗೆ ಮತ ನೀಡಲಿ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ನಿಲ್ಲುವುದು ನಿಜ. ಆದರೆ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡಬೇಕಾ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಾ ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಒಂದು ವಾರದಲ್ಲಿ ಈ ಕುರಿತು ಸ್ಪಷ್ಟಪಡಿಸುತ್ತೇನೆ. ಇಲ್ಲಿಯವರೆಗೂ ಜನರು ನನಗೆ ಪ್ರೀತಿ ತೋರಿದ್ದಾರೆ. ನಾನು ಚುನಾವಣೆಗೆ ನಿಂತರೆ ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದಿದ್ದಾರೆ.