ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ವಿರೇನ್ ಖನ್ನಾ ನಿವಾಸದ ಮೇಲೆ ದಾಳಿ ನಡೆದಿದ್ದ ವೇಳೆ 8 ದೇಶಗಳ ಕರೆನ್ಸಿ ಪತ್ತೆಯಾಗಿತ್ತು. ಹೀಗಾಗಿ ವಿದೇಶಗಳಲ್ಲಿಯೂ ವಿರೇನ್ ಖನ್ನಾ ಹಣದ ವ್ಯವಹಾರ ಹೊಂದಿರುವುದು ಬಯಲಾಗಿದೆ. ಈ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ವಿರೇನ್ ಖನ್ನಾ ವಿರುದ್ಧ ತನಿಖೆ ನಡೆಸಿದ್ದಾರೆ.
ಸ್ವಂತವಾಗಿ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಹೊಂದಿದ್ದ ವಿರೇನ್ ಖನ್ನಾ, ವಾರ್ಷಿಕ 2.5 ಕೋಟಿ ರೂ. ತೆರಿಗೆ ಪಾವತಿ ಮಾಡುತ್ತಿದ್ದ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಇವೆಂಟ್ ಆಯೋಜಿಸುತ್ತಿದ್ದ. ಅಲ್ಲದೇ ವಿದೇಶಗಳಲ್ಲಿ ಕೂಡ ಇವೆಂಟ್ ನಡೆಸುತ್ತಿದ್ದ. ಅಕ್ರಮ ಹಣ ವರ್ಗಾವಣೆ, ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಬಗ್ಗೆಯೂ ಇಡಿ, ವಿರೇನ್ ವಿರುದ್ಧ ತನಿಖೆ ನಡೆಸುತ್ತಿದೆ.