ಕೊರೊನಾ ಪ್ರಾರಂಭವಾದಾಗಿನಿಂದಲೂ ಇಂಧನ ಬೆಲೆ ಏರಿಕೆ ಕಾಣುತ್ತಲೇ ಇದೆ. ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಇತ್ತೀಚೆಗೂ ಕಾಂಗ್ರೆಸ್ ಪಕ್ಷ ಮಟ್ಟದಲ್ಲಿ ಪ್ರತಿಭಟನೆ ಮಾಡಿತ್ತು. ನಂತರವೇನು ಇಂಧನ ಬೆಲೆ ಕಡಿಮೆಯಾಗಿಲ್ಲ. ಕಳೆದ ಎರಡು ದಿನಗಳಿಂದಲೂ ಏರಿಕೆ ಕಾಣುತ್ತಿತ್ತು. ಇಂದು ಸ್ಥಿರವಾಗಿದೆ.
ಹೌದು, ಬೆಂಗಳೂರಿನಲ್ಲಿ ಇಂಧನ ದರ ಏರಿಕೆಯಾಗಿಲ್ಲ. ಪೆಟ್ರೋಲ್ ಒಂದು ಲೀಟರ್‌ಗೆ 84.39 ರೂಪಾಯಿ ಇದ್ದರೆ, ಡೀಸೆಲ್‌ಗೆ 77.88 ರೂಪಾಯಿ ಇದೆ. ಇತ್ತ ದೆಹಲಿಯಲ್ಲಿ ಪೆಟ್ರೋಲ್ ಒಂದು ಲೀಟರ್‌ಗೆ 81.73 ರೂಪಾಯಿ ಇದ್ದರೆ ಡೀಸೆಲ್‌ಗೆ 73.56 ರೂಪಾಯಿ ಇದೆ.
ಬೆಲೆಯೇನೋ ಇಂದು ಸ್ಥಿರವಾಗಿದೆ. ಆದರೆ ಈಗಾಗಲೇ ಇಂಧನ ಬೆಲೆ ಏರಿಕೆಯಾಗಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಮೊದಲೇ ಕೊರೊನಾದಿಂದ ಸಂಕಷ್ಟದಿಂದ ಬಳಲುತ್ತಿರುವ ಜನರಿಗೆ ಪೆಟ್ರೋಲ್ ಬೆಲೆ 85 ರೂಪಾಯಿಯವರೆಗೆ ಆಗಿರುವುದು ಆತಂಕಕ್ಕೀಡು ಮಾಡಿದೆ.