alex Certify ಇಲ್ಲಿದೆ ಬೆಂಗಳೂರು ಸುತ್ತಮುತ್ತ ಇರೋ ಪಿಕ್ನಿಕ್ ಸ್ಪಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬೆಂಗಳೂರು ಸುತ್ತಮುತ್ತ ಇರೋ ಪಿಕ್ನಿಕ್ ಸ್ಪಾಟ್

ಬೆಂಗಳೂರು ವಾಸಿಗಳಿಗೆ ವಿಕೆಂಡು ಬಂತು ಎಂದರೆ ಸಾಕು ಏನೋ ಒಂದು ತರಹದ ಖುಷಿ. ವೀಕೆಂಡುಗಳಲ್ಲಿ ಸ್ನೇಹಿತರೊಟ್ಟಿಗೋ ಇಲ್ಲವೇ ಕುಟುಂಬದವರೊಂದಿಗೆ ಸಿಕ್ಕ ಅಲ್ಪ ಅವಧಿಯಲ್ಲೇ ಎಲ್ಲಿಯಾದರೂ ಸುತ್ತಾಡಿಕೊಂಡು ದಿನನಿತ್ಯದ ಜಂಜಾಟದಿಂದ ಕೊಂಚ ಮಟ್ಟಿಗೆ ರಿಲ್ಯಾಕ್ಸ್ ಹೊಂದಬೇಕು ಎನ್ನುವುದು ಎಲ್ಲರ ಆಸೆ.

ಆದರೆ ಅವರಿಗಿರುವ ಕಡಿಮೆ ಅವಧಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ಬೆಂಗಳೂರಿನ ಸಮೀಪವೇ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ಬಯಸಿದರೆ ಇಲ್ಲಿದೆ ಅದರ ಲಿಸ್ಟ್.

ಸಾವನದುರ್ಗ ಬೆಟ್ಟ

ಬೆಂಗಳೂರಿನಿಂದ ಸುಮಾರು 33 ಕಿಮೀ. ದೂರ ಸಾಗಿದರೆ ಸಿಗುವುದೇ ಸಾವನದುರ್ಗ. ಈ ಪ್ರದೇಶವು ಟ್ರಕ್ಕಿಂಗ್ ತಾಣವಾಗಿದ್ದು, ಸಾವನದುರ್ಗ ಬೆಟ್ಟವು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 1226 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟವನ್ನು ಕರಿಗುಡ್ಡ ಅಂತಲು ಕರಿಯುತ್ತಾರೆ.

ಈ ಬೆಟ್ಟದ ಬುಡದಲ್ಲಿ ಸಾವಂಡಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನವಿದ್ದು, ಪ್ರಸಿದ್ಧವಾಗಿದೆ. ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಸಾಕಷ್ಟು ಜನರು ಬರುತ್ತಾರೆ. ಇದು ಟ್ರಕ್ಕಿಂಗ್ ಪ್ರಿಯರಿಗೆ ಉತ್ತಮ ತಾಣವಾಗಿದ್ದು, ಬೆಟ್ಟದ ಮೇಲಿಂದ ನಿಂತು ನೋಡಿದರೆ ಬೆಟ್ಟದ ಸುತ್ತಮುತ್ತಲಿನ ಕಾಡಿನ ಸುಂದರ ದೃಶ್ಯವನ್ನು ಸವಿಯಬಹುದು. ಇದು ಫೋಟೋಗ್ರಫಿಗೂ ಉತ್ತಮ ಸ್ಥಳವಾಗಿದೆ.

ದೊಡ್ಡ ಆಲದ ಮರ

ಬೆಂಗಳೂರಿನಿಂದ ಸುಮಾರು 25 ಕಿಮೀ. ದೂರದಲ್ಲಿರುವ ಈ ಪ್ರದೇಶವನ್ನು ದೊಡ್ಡ ಆಲದ ಮರ ಎಂದು ಕರೆಯುತ್ತಾರೆ. ಇದು ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಈ ಪ್ರದೇಶದಲ್ಲಿ ಸುಮಾರು 400 ವರ್ಷಕ್ಕಿಂತಲು ಹಳೆಯದಾದ ಮರಗಳನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿನ ತಂಪಾದ ಗಾಳಿ ಮತ್ತು ಆಹ್ಲಾದಕರ ವಾತಾವರಣ ನೋಡುಗರಿಗೆ ನೆಮ್ಮದಿಯನ್ನು ನೀಡುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದೆನಿಸಿದರೆ ಅಕ್ಟೋಬರ್‌ನಿಂದ ಮಾರ್ಚ್ ಉತ್ತಮ ಸಮಯವಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ಬೆಂಗಳೂರಿನಿಂದ ಸುಮಾರು 36 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ನೋಡಲು ತುಂಬಾ ಆಕರ್ಷಣಿಯವಾಗಿದ್ದು, ವನ್ಯಜೀವಿಗಳ ವೈವಿಧ್ಯತೆಯನ್ನು ಆನಂದಿಸಬಹುದು. ಫೋಟೋಗ್ರಾಫಿ ಮಾಡುವವರಿಗೆ ಈ ಸ್ಥಳವು ಉತ್ತಮವಾಗಿದ್ದು ಹೈಕಿಂಗ್, ಟ್ರೆಕ್ಕಿಂಗ್ ಅನ್ನು ಸಹ ಇಲ್ಲಿ ಮಾಡಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿ ಸಫಾರಿ ಡ್ರೈವ್‌ಗೆ ಹೋಗುವ ಮೂಲಕ ಕಾಡಿನ ಪ್ರಾಣಿಗಳನ್ನು ಹತ್ತಿರದಿಂದ ನೋಡಬಹುದು. ಅಲ್ಲದೇ ಇಲ್ಲಿ ಪ್ರಾಣಿ ಸಂಗ್ರಹಾಲಯವಿದ್ದು, ವೈವಿಧ್ಯಮಯ ಪ್ರಾಣಿಸಂಕುಲಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ನಂದಿ ಬೆಟ್ಟ

ಬೆಂಗಳೂರಿನಿಂದ ಸುಮಾರು 62 ಕಿಮೀ. ದೂರದಲ್ಲಿರುವ ನಂದಿ ಬೆಟ್ಟ ಪ್ರೇಮಿಗಳ ಪಾಲಿನ ಸ್ವರ್ಗವೆಂದೇ ಹೇಳಬಹುದು. ಈ ಪ್ರದೇಶಕ್ಕೆ ಮುಂಜಾನೆ 6 ಗಂಟೆಯಲ್ಲಿ ಬೀಳುವ ಇಬ್ಬನಿ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ನಂದಿಬೆಟ್ಟ ಸಮುದ್ರ ಮಟ್ಟದಿಂದ 4851 ಅಡಿ (1478 ಮೀ) ಎತ್ತರದಲ್ಲಿದ್ದು ಮುಂಜಾನೆಯಲ್ಲಿ ಮೋಡಗಳು ಪಕ್ಕದಲ್ಲಿಯೇ ಚಲಿಸುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಸೂರ್ಯೋದಯ ಮತ್ತು ಸುರ್ಯಾಸ್ತಮಾನವನ್ನು ಇತರ ಸ್ಥಳಗಳಿಗಿಂತ ಭಿನ್ನವಾಗಿ ಕಾಣಬಹುದು. ಹಾಗೆಯೇ ಪುರಾತನ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...