ಕೊರೊನಾ ಭಯದಿಂದ ಎಲ್ಲರೂ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಿಎಂಟಿಸಿ ಡ್ರೈವರ್ – ಕಂಡಕ್ಟರ್‌ಗಳು ಜೀವದ ಹಂಗು ತೊರೆದು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಿಎಂಟಿಸಿಯ ಚಾಲಕ, ನಿರ್ವಾಹಕರಲ್ಲಿ ಅನೇಕ ಮಂದಿಗೂ ಕೊರೊನಾ ಅಂಟಿದೆ. ಈ ನಡುವೆಯೂ ಕೆಲಸ ಮುಂದುವರೆಸಿದ್ದಾರೆ.
ಇಂತವರ ಪರವಾಗಿ ಇದೀಗ ಬಿಎಂಟಿಸಿ ಆಡಳಿತ ಮಂಡಳಿ ನಿಂತಿದೆ. ಕೊರೊನಾ ಸೋಂಕಿನ ಭೀತಿಯ ನಡುವೆಯೂ ತಮ್ಮ ಜೀವದ ಹಂಗುನ್ನು ತೊರೆದು ಕರ್ತವ್ಯ ನಿರ್ವಹಿಸಿದ ಬಿಎಂಟಿಸಿ ನೌಕರರಿಗೆ ಬೋನಸ್ ನೀಡಲು ನಿರ್ಧರಿಸಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿದ ಒಟ್ಟು 3,397 ಮಂದಿ ಸಿಬ್ಬಂದಿಗೆ ಸಂಬಳ ಹೊರತುಪಡಿಸಿ ದಿನ ಒಂದಕ್ಕೆ 250 ರೂಪಾಯಿಗಳಂತೆ ಬೋನಸ್ ನೀಡಲು ಬಿಎಂಟಿಸಿ ನಿರ್ಧರಿಸಿದೆ. ಈ ನೌಕರರಿಗೆ ಭತ್ಯೆ ನೀಡಲು 95.92 ಲಕ್ಷ ರೂಪಾಯಿ ಮೊತ್ತ ನಿಗದಿ ಮಾಡಲಾಗಿದೆ.