ಕೊರೊನಾ ದಿನ ದಿನಕ್ಕೂ ತನ್ನ ವೇಗ ಪಡೆಯುತ್ತಿದೆ. ಯುಎಸ್ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಘಾತಕಾರಿ ಸಂಗತಿಯನ್ನು ಹೇಳಿದೆ. ಮುಂದಿನ 20 ದಿನಗಳಲ್ಲಿ 19,000 ಅಮೆರಿಕನ್ನರು ಕೊರೊನಾಗೆ ಬಲಿಯಾಗಲಿದ್ದಾರೆ ಎಂದಿದೆ.
ಜುಲೈನ ಆರಂಭಿಕ ದಿನಗಳಲ್ಲಿ ಕೊರೊನಾಕ್ಕೆ ಒಂದೇ ದಿನ 1400 ಕ್ಕೂ ಹೆಚ್ಚು ಸಾವಾಗಿತ್ತು.ಯುಎಸ್ ನಲ್ಲಿ ಕೊರೊನಾಕ್ಕೆ ಒಟ್ಟೂ 1,58,375 ಮಂದಿ ಸಾವನ್ನಪ್ಪಿದ್ದಾರೆ. 48 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.
ಆಗಸ್ಟ್ 22 ರ ಹೊತ್ತಿಗೆ ಕೊರೊನಾದಿಂದ ಸಾವನ್ನಪ್ಪುವ ಅಮೆರಿಕನ್ನರ ಸಂಖ್ಯೆ 1 ಲಕ್ಷ 73 ಸಾವಿರ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಮುಂದಿನ 30 ದಿನಗಳವರೆಗೆ, ಪ್ರತಿದಿನ ಸರಾಸರಿ 1000 ಸಾವುಗಳು ಸಂಭವಿಸಬಹುದು ಎನ್ನಲಾಗಿದೆ. ಕೊರೊನಾ ಅಮೆರಿಕಾದ ಎಲ್ಲ ಸಮುದಾಯವನ್ನು ತಲುಪಿದೆ. ಈಗ ಹಳ್ಳಿಗಳಲ್ಲೂ ತನ್ನ ಅಟ್ಟಹಾಸ ಶುರು ಮಾಡಿದೆ. ಮಾರ್ಚ್, ಏಪ್ರಿಲ್ ನ ಪರಿಸ್ಥಿತಿ ಈಗಿಲ್ಲ. ಬಹಳ ವೇಗವಾಗಿ ಕೊರೊನಾ ಹರಡುತ್ತಿದೆ.