ನಮ್ಮ ಕರ್ನಾಟಕದ ಪಕ್ಕದ ರಾಜ್ಯ ಕೇರಳದ ಕಾಸರಗೋಡಿನಲ್ಲೊಂದು ಕಾರಣಿಕ ದೈವಸ್ಥಾನವೊಂದಿದೆ. ಕರ್ನಾಟಕದ ಗಡಿಭಾಗದಲ್ಲಿರುವ ಕಾಸರಗೋಡಿನಲ್ಲಿರುವ ಈ ಕ್ಷೇತ್ರವನ್ನು ಕಾನತ್ತೂರು ಕ್ಷೇತ್ರ ಎಂದು ಕರೆಯುತ್ತಾರೆ. ಇದು ಕಾನತ್ತೂರು ನಾಲ್ವರು ದೈವಗಳ ಕ್ಷೇತ್ರ. ಜನರು ಈ ಕ್ಷೇತ್ರದ ಹೆಸರು ಕೇಳಿದ್ರೆನೇ ಭಯ ಪಡ್ತಾರೆ. ಅಷ್ಟೊಂದು ಪವರ್‌ಫುಲ್ ಕ್ಷೇತ್ರ ಇದಾಗಿದೆ.
ಈ ದೈವಸ್ಥಾನದಲ್ಲಿ ದೈವಗಳೆ ನ್ಯಾಯ ತೀರ್ಮಾನ ಮಾಡುತ್ತವೆ. ದೇಶಾದ್ಯಂತ ಖ್ಯಾತಿವೆತ್ತಿರುವ ಈ ತಾಣ ಸತ್ಯ ಸ್ಥಳವೆಂದೇ ಭಕ್ತರ ಮನಸ್ಸಿನಲ್ಲಿ ಜಾಗ ಪಡೆದಿದೆ. ಈ ಕ್ಷೇತ್ರವು ದೇವರ ನ್ಯಾಯಾಲಯ ಎಂದೇ ಹೆಸರಯವಾಸಿಯಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣಗಳು ಇಲ್ಲಿ ಇತ್ಯರ್ಥವಾಗುತ್ತವಂತೆ. ಅದಕ್ಕಾಗಿ ದೂರದೂರದ ಊರಿನ ಜನರು ಇಲ್ಲಿಗೆ ಆಗಮಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ.
ವಿಷ್ಣುಮೂರ್ತಿ, ರಕ್ತೇಶ್ವರಿ, ರಕ್ತ ಚಾಮುಂಡಿ, ಉಗ್ರಮೂರ್ತಿ, ಪ್ರಧಾನ ದೈವಗಳಾಗಿದ್ದಾರೆ. ಹಾಗಾಗಿ ಇದನ್ನು ನಾಲ್ವರು ದೈವಗಳ ಕ್ಷೇತ್ರ ಎನ್ನಲಾಗುತ್ತದೆ. ನ್ಯಾಯಾಲಯದಲ್ಲಿ ತೀರ್ಮಾನವಾಗದ ಪ್ರಕರಣಗಳು ಇಲ್ಲಿ ತೀರ್ಮಾನವಾಗುತ್ತವೆ. ಪ್ರೇತಾತ್ಮಗಳ ವಿಮೋಚನೆಯೂ ಇಲ್ಲಿ ನಡೆಯುತ್ತದೆ. ಹಣ ಬರಬೇಕಿದ್ದಲ್ಲಿ ಅದು ನ್ಯಾಯವಾದವರಿಗೆ ತಲುಪುತ್ತದೆ. ವಿವಾಹ ಕೈ ತಪ್ಪಿದಾಗ ಇಲ್ಲಿ ಬಂದು ಕೈಮುಗಿದರೆ ಆ ಸಮಸ್ಯೆ ಪರಿಹಾರವಾಗುತ್ತದೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಇಲ್ಲಿ ಸಿಗುತ್ತದೆ.
ಬೆಂಗಳೂರಿನಲ್ಲಿ ನಿಷೇಧಾಜ್ಞೆ; ನಿಯಮ ಉಲ್ಲಂಘಿಸಿದರೆ ಬಂಧಿಸಿ ಕ್ರಮ
ಒಂದು ಕಡೆಯವರು ಕ್ಷೇತ್ರಕ್ಕೆ ಬಂದು ದೂರು ನೀಡಿದರೆ, ಇನ್ನೊಂದು ಕಡೆಯವರಿಗೆ ಕ್ಷೇತ್ರದ ಆಡಳಿತ ಮಂಡಳಿ ನೋಟೀಸ್ ಕಳಿಸುತ್ತದೆ. ಆ ನೋಟೀಸ್‌ನ್ನು ಯಾರೂ ಅಲ್ಲಗಳೆಯುವಂತಿಲ್ಲ. ನೋಟಿಸ್ ಕೈ ಸೇರಿದ ತಕ್ಷಣ ನಿಗಧಿತ ದಿನಾಂಕದಂದು ಈ ಎರಡು ಕಡೆಯವರೂ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಒಂದು ವೇಳೆ ಕ್ಷೇತ್ರದ ನೋಟಿಸ್ ನಿರಾಕರಿಸಿದ್ದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಮೂರು ಬಾರಿ ನೋಟಿಸ್ ಕಳಿಸುತ್ತದೆ. ಮೂರು ಬಾರಿಯೂ ನೋಟಿಸ್‌ನ್ನು ಕಡೆಗಣಿಸಿದ್ದಲ್ಲಿ ಕ್ಷೇತ್ರದ ಮೋಕ್ತೇಸರರು ಅದನ್ನು ದೇವರಿಗೆ ಬಿಟ್ಟು ಬಿಡುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ಆರೋಪಿಗೆ ಶಿಕ್ಷೆಯಾಗಿರುವ ಹಲವಾರು ಘಟನೆಗಳು ನಡೆದಿವೆ.
ಈ ಕ್ಷೇತ್ರಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವ ವ್ಯಕ್ತಿಗಳು ಇಲ್ಲಿನ ತೀರ್ಪಿಗೆ ತಲೆಬಾಗಲೇ ಬೇಕು. ಇಲ್ಲಿನ ನಾಲ್ವರು ದೈವರು ತಮ್ಮನ್ನು ತಮ್ಮ ಕುಟುಂಬದವರನ್ನು ನೆಮ್ಮದಿಯಾಗಿ ಬದುಕಲು ಬಿಡೋದಿಲ್ಲ ಎನ್ನುವ ಭಯದಿಂದ ಇಲ್ಲಿನ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತಾರೆ.