alex Certify ಇಟಲಿ ಮಹಿಳೆಯ ʼಯಾವ ಜನ್ಮದ ಮೈತ್ರಿʼ ಹಾಡಿಗೆ ಮನಸೋತ ಕನ್ನಡಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಟಲಿ ಮಹಿಳೆಯ ʼಯಾವ ಜನ್ಮದ ಮೈತ್ರಿʼ ಹಾಡಿಗೆ ಮನಸೋತ ಕನ್ನಡಿಗರು

ಋಣಾನುಬಂಧವಿಲ್ಲದೇ ಯಾವ ಬಂಧವೂ ಬೆಸೆಯಲಾರವು ಎಂಬ ಮಾತಿದೆ. ಈ ಮಾತು ಅಕ್ಷರಶಃ ನಿಜವೆನಿಸುತ್ತೆ. ದೂರದ ಇಟಲಿ ಮಹಿಳೆಯ ಕಂಠಸಿರಿಯಲ್ಲಿ ಹೊರ ಹೊಮ್ಮಿದ ಕನ್ನಡದ ಜನಪ್ರಿಯ ಗೀತೆ ’ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು….’ ಹಾಡು ಇದೀಗ ಕನ್ನಡಿಗರ ಹೃದಯ ಗೆದ್ದಿದೆ.

ಕುವೆಂಪು ವಿರಚಿತ ಯಾವ ಜನ್ಮದ ಮೈತ್ರಿ ಹಾಡು ಯಾರಿಗೆ ತಾನೇ ಇಷ್ಟಪಡುವುದಿಲ್ಲ. ಪ್ರತಿಯೊಬ್ಬರ ಜೀವನದ ಸಂಗತಿಗಳು ಈ ಹಾಡಿನೊಂದಿಗೆ ಬೆಸೆದುಕೊಂಡಿದೆ. ಇಟಲಿ ಮಹಿಳೆಯೊಬ್ಬರು ಈ ಗೀತೆಯನ್ನು ತಮ್ಮ ಸುಮಧುರ ಕಂಠದಲ್ಲಿ ಸ್ಪಷ್ಟ ಉಚ್ಛಾರಣೆಯೊಂದಿಗೆ ಹಾಡಿ ಕನ್ನಡಿಗರನ್ನು ನಿಬ್ಬೆರಗುಗೊಳಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಟಲಿ ಮಹಿಳೆಯ ಕನ್ನಡ ಹಾಡು ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ನಿಜಕ್ಕೂ ಇಟಲಿಯ ಈ ಮಹಿಳೆಗೂ ಕನ್ನಡನಾಡಿಗೂ ಯಾವ ಜನ್ಮದ ಮೈತ್ರಿಯೋ…ಎಂದೆನಿಸದಿರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...