ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತವನ್ನು ಬಂದ್ ಮಾಡಲಾಗಿತ್ತು.
ಇದೀಗ 5ನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ನೀಡಿರುವ ಕಾರಣ ಇಂದಿನಿಂದ ಪ್ರವಾಸಿಗರಿಗಾಗಿ ಜೋಗ ಜಲಪಾತ ತೆರೆದುಕೊಳ್ಳಲಿದೆ.
ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮಾಸ್ಕ್ ಧರಿಸಿದ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಲ್ಲದೆ ಮುಖ್ಯದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಯಲಿದ್ದು ಉಷ್ಣಾಂಶ ನಿಗದಿತ ಮಟ್ಟಕ್ಕಿಂತ ಹೆಚ್ಚಿದ್ದರೆ ಒಳಗೆ ಬಿಡಲಾಗುವುದಿಲ್ಲ.