ಮೈಸೂರು: ಸ್ವಪಕ್ಷದ ಸಿಎಂ ವಿರುದ್ಧವೇ ಮತ್ತೆ ವಾಗ್ದಾಳಿ ನಡೆಸಿದ ಬಿಜೆಪಿ ಎಂ.ಎಲ್.ಸಿ ಹೆಚ್. ವಿಶ್ವನಾಥ್, ಸಿಎಂ ಯಡಿಯೂರಪ್ಪನವರಿಗೆ ಕಣ್ಣು ಕಾಣಲ್ಲ, ಕಿವಿಯೂ ಕೇಳಲ್ಲ, ಹೇಳಿದ್ದೂ ಅರ್ಥ ಆಗಲ್ಲ. ಇಂಥ ಮುಖ್ಯಮಂತ್ರಿಗಳನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್, ಬಿಬಿಎಂಪಿ ಬೆಡ್ ಬ್ಲಾಕಿಂಗ್ ಅವ್ಯವಹಾರಕ್ಕೆ ಸಿಎಂ ಬಿಎಸ್ ವೈ ಅವರೇ ನೇರ ಹೊಣೆ. ಸಿಎಂ ಬಳಿ ಹೋದ ಖಾತೆಗಳು ಸತ್ತೇ ಹೋಗುತ್ತವೆ. ಒಂದೇ ಒಂದು ದಿನ ಯಡಿಯೂರಪ್ಪನವರು ಬಿಬಿಎಂಪಿಗೆ ಹೋಗಿಲ್ಲ, ಸಭೆಯನ್ನೂ ನಡೆಸಿಲ್ಲ. ಅಂದಮೇಲೆ ಅವರಿಗೇಕೆ ಆ ಖಾತೆ ಎಂದು ಪ್ರಶ್ನಿಸಿದರು.
ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ್ ಸಚಿವಾಲಯ
ಇನ್ನು ಕೊರೊನಾ ನಿರ್ವಹಣೆಗಾಗಿ ಐವರು ಸಚಿವರ ನೇಮಕ ವಿಚಾರವಾಗಿ ಮಾತನಾಡಿದ ಅವರು, ಆರೋಗ್ಯ ಸಚಿವ ಸುಧಾಕರ್ ಸ್ಥಿತಿ ದ್ರೌಪದಿ ವಸ್ತ್ರಾಪಹರಣದಂತಾಗಿದೆ. ಸುಧಾಕರ್ ಬಳಿ ಇದ್ದ ಎಲ್ಲಾ ಅಧಿಕಾರ ಕಿತ್ತುಕೊಂಡಿದ್ದಾರೆ. ಸುಧಾಕರ್ ಬಳಿ ಹೋಗಿ ನೀವು ಏನು ಎಂದು ಕೇಳಿದರೆ ಹೆಲ್ತ್ ಮಿನಿಸ್ಟರ್ ಎಂದು ಹೇಳಬೇಕಷ್ಟೆ ಪಾಪ ಎಂದು ವ್ಯಂಗ್ಯವಾಡಿದ್ದಾರೆ.